ಉಡುಪಿ: ಕರ್ನಾಟಕ ವಿಶ್ವ ವಿದ್ಯಾಲಯ ಧಾರವಾಡ, ಇದರ ಸಂಖ್ಯಾಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿ ಸುಹಾಸ್ ಮಂಡಿಸಿದ “ಎ ಸ್ಟದಿ ಆನ್ ಡಿಸೈನ್ ಆಂಡ್ ಅನಾಲಿಸಿಸ್ ಆಫ್ ಸರ್ವೈವಲ್ ಪ್ರೊಬ್ಯಾಬಿಲಿಟಿ ಮಾಡೆಲ್ಸ್” ಮಹಾಪ್ರಬಂಧಕ್ಕೆ “ಡಾಕ್ಟರ್ ಆಫ್ ಪಿಎಚ್.ಡಿ” ಪದವಿ ದೊರಕಿದೆ. ಸುಹಾಸ್ ಕೆವಿವಿಯ ಸಂಖ್ಯಾಶಾಸ್ತ್ರ ಪ್ರಾಧ್ಯಾಪಕಿ ಡಾ. ಶ್ರೀಮತಿ ಎಸ್.ಬಿ ಮುನೋಲಿ ಇವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದಾರೆ. ಇವರು ಉಡುಪಿಯ ಗುಂಡಿಬೈಲು ಹಿರಿಯ ಪ್ರಾಥಮಿಕ ಶಾಲೆಯಿಂದ ಪ್ರಾಥಮಿಕ ಶಿಕ್ಷಣವನ್ನು, ಒಳಕಾಡು ಸಂಯುಕ್ತ ಹಿರಿಯ ಪ್ರಾಥಮಿಕ ಶಾಲೆಯಿಂದ ಪ್ರೌಢ ಶಿಕ್ಷಣವನ್ನು, ಎಂಜಿಎಂ ಕಾಲೇಜಿನಿಂದ ಪದವಿ ಪೂರ್ವ ಹಾಗೂ ಬಿ.ಎಸ್.ಸಿ ಪದವಿಯನ್ನು ಮತ್ತು ಧಾರವಾಡ ಕರ್ನಾಟಕ ವಿಶ್ವಾವಿದ್ಯಾಲಯದಿಂದ ಸಂಖ್ಯಾಶಾಸ್ತ್ರದಲ್ಲಿ ಎಂ ಎಸ್ ಸಿ ಪದವಿಯನ್ನು ಪಡೆದು, ಮೂರು ಚಿನ್ನದ ಪದಕಗಳೊಂದಿಗೆ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ, ಡಾಕ್ಟರೇಟ್ ಪದವಿ ಪಡೆದಿದ್ದಾರೆ.
ಸುಹಾಸ್ ಉಡುಪಿಯ ಪ್ರಸಿದ್ದ ಕೀರ್ತನಕಾರರಾದ ದಿ.ಆರ್. ಶ್ರೀಶದಾಸ್ ಇವರ ಮೊಮ್ಮಗ ಹಾಗೂ ಶ್ರೀಮತಿ ಕಮಲಾಕ್ಷಿ ಮತ್ತು ಪ್ರಾಣೇಶ್ ಇವರ ಪುತ್ರ.