ಉಡುಪಿ-ಮಣಿಪಾಲ ಜಂಕ್ಷನ್ ಗೆ ಉದಯವಾಣಿ ವೃತ್ತ ನಾಮಕರಣ: ಆಕ್ಷೇಪಣೆ/ಸಲಹೆ ಆಹ್ವಾನ

ಉಡುಪಿ: ನಗರಸಭಾ ವ್ಯಾಪ್ತಿಯ ಉಡುಪಿ-ಮಣಿಪಾಲ ಜಂಕ್ಷನ್‌ನಲ್ಲಿ ಜಿಲ್ಲಾಧಿಕಾರಿ ಕಛೇರಿ ಕಡೆಗೆ
ಹೋಗುವ ರಸ್ತೆ ಮತ್ತು ಮಣಿಪಾಲದ ಅನಂತನಗರದ ಕಡೆಗೆ ಹೋಗುವ ಇನ್ನೊಂದು ರಸ್ತೆ ಸಂಧಿಸುವ ವೃತ್ತಕ್ಕೆ ಉದಯವಾಣಿ ವೃತ್ತ ಎಂದು ನಾಮಕರಣ ಮಾಡುವ ಕುರಿತು ಆಕ್ಷೇಪಣೆ ಅಥವಾ ಸಲಹೆಗಳು ಇದ್ದಲ್ಲಿ 30 ದಿನಗಳ ಒಳಗೆ ನಗರಸಭೆಯ ಕಛೇರಿಗೆ ಸಲ್ಲಿಸಬಹುದಾಗಿದೆ ಎಂದು ನಗರಸಭೆಯ ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.