ಮಂಚಿ: ಹೊಸ ವಿದ್ಯುತ್ ತಂತಿ ಹಾಕಿಸಿಕೊಟ್ಟು ವೃದ್ಧ ದಂಪತಿಯ ಆತಂಕ ದೂರಾಗಿಸಿದ ಗ್ರಾಪಂ ಸದಸ್ಯ ಸುಧೀರ್ ಪೂಜಾರಿ

ಮಂಚಿ: 80ನೇ ಬಡಗುಬೆಟ್ಟು ಗ್ರಾಮದ ರಾಜೀವನಗರದಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿರುವ ಅಶಕ್ತ ವೃದ್ಧ ದಂಪತಿಯ ಮನೆಗೆ ನೂತನವಾಗಿ ಆಯ್ಕೆಯಾದ ಗ್ರಾಪಂ ಸದಸ್ಯ ಸುಧೀರ್ ಪೂಜಾರಿಯವರು ಹೊಸ ವಿದ್ಯುತ್ ತಂತಿ (ಸರ್ವಿಸ್ ಲೈನ್) ಯನ್ನು ಹಾಕಿಸಿಕೊಡುವ ಮೂಲಕ ಸಾಮಾಜಿಕ ಬದ್ಧತೆಯನ್ನು ಮೆರೆದಿದ್ದಾರೆ.

ಈ ವೃದ್ಧ ದಂಪತಿಯ ಮನೆಯ ವಿದ್ಯುತ್ ಸಂಪರ್ಕದ ತಂತಿಯು ತುಂಡಾಗಿ ಬೀಳುವ ಪರಿಸ್ಥಿತಿಗೆ ತಲುಪಿದ್ದು, ಈ ಬಗ್ಗೆ ಹಿಂದಿನ ಸದಸ್ಯರಲ್ಲಿ ಹಲವು ಬಾರಿ ಮನವಿ ಮಾಡಿದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ.

ಇದೀಗ ನೂತನವಾಗಿ ಆಯ್ಕೆಗೊಂಡ ಸದಸ್ಯ ಸುಧೀರ್ ಪೂಜಾರಿಯವರ ಬಳಿ ದಂಪತಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದರು. ಇದಕ್ಕೆ ಕೂಡಲೇ ಸ್ಪಂದಿಸಿದ ಸುಧೀರ್ ಅವರು ಸ್ವಂತ ಖರ್ಚಿನಲ್ಲಿ ಹೊಸ ವಿದ್ಯುತ್ ಸಂಪರ್ಕ ತಂತಿಯನ್ನು ಅಳವಡಿಸಿಕೊಟ್ಟಿದ್ದಾರೆ. ಆ ಮೂಲಕ ದಂಪತಿಯ ಆಂತಕ ದೂರ ಮಾಡಿದ್ದಾರೆ.