ಮಣಿಪಾಲ ಕೆಎಂಸಿಯಲ್ಲಿ ಯಶಸ್ವಿ ಮಕ್ಕಳ ಸಂಕೀರ್ಣ ಹೃದಯ ಶಸ್ತ್ರಚಿಕಿತ್ಸೆ

ಮಣಿಪಾಲ: ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯ ವೈದ್ಯರು ನಡೆಸಿದ ಮಕ್ಕಳ ಸಂಕೀರ್ಣ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ.

ಆಸ್ಪತ್ರೆಯ ಹೃದಯ, ರಕ್ತನಾಳ ಮತ್ತು ಶ್ವಾಸಕೋಶ ಶಸ್ತ್ರಚಿಕಿತ್ಸೆ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಗುರುಪ್ರಸಾದ್ ರೈ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.

ವಿದೇಶದಲ್ಲಿ ನೆಲೆಸಿರುವ ಭಾರತದ ಮೂಲದ ಯುವ ದಂಪತಿಗಳಿಗೆ ನವಜಾತ ಶಿಶು ಹುಟ್ಟುವ ಖುಷಿ ಒಂದು ಕಡೆಯಾದರೆ, ಅದೇ ಶಿಶು ಬದುಕುಳಿಯಲು ಹುಟ್ಟಿದ ಮೊದಲ ಕೆಲವು ದಿನಗಳಲ್ಲೇ ಸಂಕೀರ್ಣವಾದ ಹೃದಯ ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ ಎಂದು ಗರ್ಭಾವಸ್ಥೆಯ ಅವಧಿಯಲ್ಲಿ ದೃಢಪಡಿತ್ತು. ಕುಟುಂಬದವರು ಕಸ್ತೂರ್ಬಾ ಆಸ್ಪತ್ರೆಯ ಮಕ್ಕಳ ಹೃದ್ರೋಗ ಮತ್ತು ಹೃದಯ ಶಸ್ತ್ರ ಚಿಕಿತ್ಸಾ ತಂಡವನ್ನು ಸಂಪರ್ಕಿಸಿ ತಮ್ಮ ಸ್ಕ್ಯಾನ್ ವೈದ್ಯಕೀಯ ವರದಿಯನ್ನು ತೋರಿಸಿದರು.

ಶಸ್ತ್ರಚಿಕಿತ್ಸೆಯ ಕಾರ್ಯಸಾಧ್ಯತೆ ಮತ್ತು ಸಾಮಾನ್ಯ ಜೀವಿತಾವಧಿಯ ಬಗ್ಗೆ ವೈದ್ಯರು ಕುಟುಂಬಕ್ಕೆ ಭರವಸೆ ನೀಡಿದರು. ದಂಪತಿ ಭಾರತಕ್ಕೆ ಹಿಂತಿರುಗಿ ಹೆಂಡತಿ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದರು. ಡಾ. ಗುಂಜನ್ ಬಂಗಾ ನೇತೃತ್ವದ ಮಕ್ಕಳ ಹೃದ್ರೋಗ ತಂಡವು ಪ್ರಸವಪೂರ್ವ ರೋಗನಿರ್ಣಯವನ್ನು ಖಚಿತಪಡಿಸಲು ದೃಢೀಕರಣದ ಸ್ಕ್ಯಾನ್ ಮತ್ತು ಸಿ ಟಿ ಸ್ಕ್ಯಾನ್ ಮಾಡಿತು.

ಮಗುವಿಗೆ ಕುಹರದ ಸೆಪ್ಟಲ್ ದೋಷದೊಂದಿಗೆ ಮಹಾಪಧಮನಿಯ ಕಮಾನುವಿನಲ್ಲಿ ಅಡಚಣೆ ಇತ್ತು, ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ ಅದು ಬಹಳ ಬೇಗ ಮಾರಕವಾಗುವ ಸಂಭವವಿತ್ತು. ಶಿಶುವನ್ನು ಡಾ. ಲೆಸ್ಲಿ ಲೂಯಿಸ್ ನೇತೃತ್ವದ ನವಜಾತ ಶಿಶು ವಿಭಾಗದ ತಂಡವು ಔಷಧಿಗಳೊಂದಿಗೆ ಸ್ಥಿರಗೊಳಿಸಿದರು ಮತ್ತು ಹುಟ್ಟಿದ ಮೊದಲ ವಾರದಲ್ಲಿ ಮುಖ್ಯ ಹೃದಯ ಶಸ್ತ್ರಚಿಕಿತ್ಸಕ ಡಾ. ಅರವಿಂದ್ ಬಿಷ್ಣೋಯ್ ಅವರು ಶಸ್ತ್ರಚಿಕಿತ್ಸೆ ನಡೆಸಿದರು. ಮಗುವನ್ನು ಶಸ್ತ್ರಚಿಕಿತ್ಸೆಯ ನಂತರ 10 ದಿನಗಳಲ್ಲಿ ಆಸ್ಪತ್ರೆಯಿಂದ ಮನೆಗೆ ಬಿಡುಗಡೆಯಾಯಿತು ಎಂದು ಮಾಹಿತಿ ನೀಡಿದರು.ಇನ್ನೂ ಒಂದು ಸಂಕೀರ್ಣ ಹೃದಯ ಚಿಕಿತ್ಸೆ ಇಲ್ಲಿ ಯಶಸ್ವಿಯಾಗಿದೆ.

ಸುದ್ದಿಗೋಷ್ಠಿಯಲ್ಲಿ ಡಾ. ಅಪುರ್ವ್ ಬರ್ಚೆ, ಡಾ ಗುಂಜನ್ ಬಂಗ, ಡಾ ಅರವಿಂದ್ ಬಿಷನೋಯ್, ಡಾ ಪದ್ಮಕುಮಾರ್, ಡಾ ಅವಿನಾಶ್ ಶೆಟ್ಟಿ, ಡಾ. ಗುರುಪ್ರಸಾದ್ ರೈ ಉಪಸ್ಥಿತರಿದ್ದರು.