ಉಡುಪಿ: ಕೇಂದ್ರ ಸರ್ಕಾರದ ಸಮಗ್ರ ಕೃಷಿ ಮಾರುಕಟ್ಟೆ ಯೋಜನೆಯ ಉಪಯೋಜನೆಯಾದ ಕೃಷಿ ಮಾರುಕಟ್ಟೆ ಮೂಲಭೂತ ಸೌಕರ್ಯಾಭಿವೃದ್ಧಿ ಯೋಜನೆಯಡಿ ಕೃಷಿ/ತೋಟಗಾರಿಕಾ ಸಂಗ್ರಹಣಾ ಘಟಕ ಹಾಗೂ ರೈತ- ಗ್ರಾಹಕ ಮಾರುಕಟ್ಟೆ, ಗ್ರಾಮೀಣ ಮಾರುಕಟ್ಟೆ ಮೂಲಭೂತ ಸೌಕರ್ಯದ ಉನ್ನತೀಕರಣಕ್ಕೆ ಸಹಾಯಧನ ಒದಗಿಸಲಾಗುವುದು.
ರೈತ ಉತ್ಪಾದಕರ ಸಂಸ್ಥೆಗಳು, ಪಂಚಾಯತ್ಗಳು, ಮಹಿಳಾ, ಪ.ಜಾತಿ ಮತ್ತು ಪ.ಪಂಗಡದ ಉದ್ದಿಮೆದಾರರು ಮತ್ತು ಅವರ ಸಹಕಾರ ಸಂಘ ಮತ್ತು ಸ್ವ ಸಹಾಯ ಸಂಘಗಳು ಸ್ಥಾಪಿಸುವ ಸಂಗ್ರಹಣಾ ಘಟಕಗಳಿಗೆ ಹಾಗೂ ರೈತ- ಗ್ರಾಹಕ ಮಾರುಕಟ್ಟೆ, ಗ್ರಾಮೀಣ ಮಾರುಕಟ್ಟೆ ಮೂಲಭೂತ ಸೌಕರ್ಯದ ಉನ್ನತೀಕರಣಕ್ಕೆ ಶೇ.33.33 ಹಾಗೂ ಇತರೆ ವರ್ಗದ ಫಲಾನುಭವಿಗಳಿಗೆ ಶೇ. 25 ರಷ್ಟು ಸಹಾಯಧನ ನೀಡಲಾಗುವುದು.
ಸಾಲ ಸೌಲಭ್ಯ ಪಡೆಯುವ ಬ್ಯಾಂಕ್ನ ಮೂಲಕ ಸಹಾಯಧನ ಮಂಜೂರಾತಿಗಾಗಿ ಪ್ರಸ್ತಾವನೆಗಳನ್ನು ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕರು, ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್, ಮಂಗಳೂರು ಮೊಬೈಲ್ ಸಂ.: 8547702196, ಇ-ಮೇಲ್: [email protected] ಅನ್ನು ಸಂಪರ್ಕಿಸಬಹುದಾಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.