ಸುಬ್ರಹ್ಮಣ್ಯ: ಸುಬ್ರಹ್ಮಣ್ಯದ ಕುಮಾರ ಪರ್ವತದಲ್ಲಿ ನಾಪತ್ತೆಯಾಗಿದ್ದ ಯುವಕ ದೇವರಗದ್ದೆಯಲ್ಲಿರುವ ಮನೆಯಲ್ಲಿ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ.
ದೇಗುಲಕ್ಕೆ ಕಾಡಿನಿಂದ ನೀರು ಸರಬರಾಜಿಗೆ ಅಳವಡಿಸಿದ್ದ ಪೈಪುಗಳ ಮೂಲಕವೇ ಸಾಗಿ ಬಂದು ದೇವರಗದ್ದೆಗೆ ತಲುಪಿದ್ದಾರೆ.
ಬೆಂಗಳೂರು ಗಾಯತ್ರಿ ನಗರದ ನಿವಾಸಿ ಸಂತೋಷ್ ಸೋಮವಾರ ಸುಬ್ರಹ್ಮಣ್ಯದ ಪುಷ್ಪಗಿರಿ ವನ್ಯಧಾಮ ವ್ಯಾಪ್ತಿಯ ಕುಮಾರ ಪರ್ವತ ಚಾರಣಕ್ಕೆ ಹೋಗಿದ್ದಾಗ ನಾಪತ್ತೆಯಾಗಿದ್ದರು.
ಹೀಗಾಗಿ ಪುಷ್ಪಗಿರಿ ವನ್ಯಧಾಮದ ಗಿರಿಗದ್ದೆಯಲ್ಲಿ ನಾಲ್ಕು ತಂಡಗಳಲ್ಲಿ ಹುಡುಕಾಟ ನಡೆಸಿದ್ದರು.
ಬೆಂಗಳೂರಿಂದ ಸುಮಾರು 12 ಮಂದಿಯ ತಂಡ ಚಾರಣಕ್ಕೆ ತೆರಳಿದ್ದರು. ಈ ಮಧ್ಯೆ ಸಂತೋಷ್ ಧಿಡೀರ್ ನಾಪತ್ತೆಯಾಗಿದ್ದರು.












