ಉಡುಪಿ: “ಕರ್ನಾಟಕ ಒಂದು ರಾಜ್ಯ ಹಲವು ಜಗತ್ತುಗಳು” ಎಂಬ ಘೋಷವಾಕ್ಯಕ್ಕೆ ಪೂರಕವಾಗುವಂತೆ ಜಿಲ್ಲೆಯಲ್ಲಿನ ಪ್ರವಾಸಿ ತಾಣಗಳ ಕುರಿತಂತೆ ನೈಸರ್ಗಿಕ, ಧಾರ್ಮಿಕ, ವನ್ಯಜೀವಿ, ಆಹಾರ ಪದ್ಧತಿ ಹಾಗೂ ಸ್ಥಳೀಯ ಕಲೆ ಮತ್ತು ಸಂಸ್ಕೃತಿ ಬಿಂಬಿಸುವ ವಿಭಿನ್ನ ಹಾಗೂ ವೈಶಿಷ್ಟ್ಯ ಪೂರ್ಣ ಸಮಗ್ರ ಮಾಹಿತಿಯನ್ನೊಳಗೊಂಡ ಆಕರ್ಷಣೀಯ ವಿನೂತನ ಪ್ರಾತ್ಯಕ್ಷಿಕೆಯನ್ನು ಸಿದ್ಧಪಡಿಸಿ ಸಹಾಯಕ ನಿರ್ದೇಶಕರ ಕಚೇರಿ, ಪ್ರವಾಸೋದ್ಯಮ ಇಲಾಖೆ ಕಚೇರಿಗೆ ಅಥವಾ ಇ-ಮೇಲ್ [email protected] ಗೆ ಡಿಸೆಂಬರ್ 15 ರ ಒಳಗೆ ಸಲ್ಲಿಸಬಹುದಾಗಿದೆ.
ಆಕರ್ಷಕ ಒಂದು ಪ್ರಾತ್ಯಕ್ಷಿಕೆಯ ವಿಜೇತರಿಗೆ ಬಹುಮಾನ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಪ್ರವಾಸೋದ್ಯಮ ಇಲಾಖೆ, ಉಡುಪಿ ದೂರವಾಣಿ ಸಂಖ್ಯೆ: 0820-2574868 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.