ಗೃಹಲಕ್ಷ್ಮಿ ಯೋಜನೆ: ಯಾವುದೇ ಲಿಂಕ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ; ನಿಗದಿತ ಕೇಂದ್ರಗಳಲ್ಲೇ ಅರ್ಜಿ ಸಲ್ಲಿಕೆ

ಉಡುಪಿ: ಜು. 22ರಿಂದ ಗೃಹ ಲಕ್ಷ್ಮೀ ಯೋಜನೆಗೆ ನಿಮ್ಮ ಸಮೀಪದ ಯಾವುದೇ ಗ್ರಾಮ ಒನ್ ಸೇವಾ ಕೇಂದ್ರ, ಗ್ರಾಮ ವನ್ ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಬಹುದು. ನಿನ್ನೆ ಮೊಬೈಲಿಗೆ ಬಂದ ಮೆಸೇಜಿನಲ್ಲಿ ನಿಗದಿತ ದಿನದಂದು ನಿಗದಿತ ಸಮಯಕ್ಕೆ ಸೂಚಿಸಿದ ಗ್ರಾಮ ಒನ್ ಸೇವಾ ಕೇಂದ್ರ ಅಥವಾ ಬಾಪೂಜಿ ಸೇವಾ ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಬೇಕು ಎಂದು ಇಲಾಖೆ ಆದೇಶ ಹೊರಡಿಸಿತ್ತು. ಈ ಆದೇಶ ರದ್ದಾಗಿದೆ. ಇನ್ನು ಮುಂದೆ ನಿಮ್ಮ ಜಿಲ್ಲಾ ವ್ಯಾಪ್ತಿಯ ಯಾವುದೇ ಗ್ರಾಮ ಒನ್ ಸೇವಾ ಕೇಂದ್ರ, ಬಾಪೂಜಿ ಸೇವಾ ಕೇಂದ್ರ, ಕರ್ನಾಟಕ ಒನ್, ಮಂಗಳೂರು ಒನ್ ಸೇವಾ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದು. ಬೇಕಾಗುವ ದಾಖಲೆಗಳು ಕುಟುಂಬದ ಮುಖ್ಯಸ್ಥೆಯ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ರೇಷನ್ ಕಾರ್ಡ್ ದಯವಿಟ್ಟು ಈ ಸಂದೇಶವನ್ನು ಎಲ್ಲಾ ವಾಟ್ಸಪ್ ಗ್ರೂಪ್ ಗಳಿಗೆ ಕಳುಹಿಸಿ. ದಯವಿಟ್ಟು ಗಮನಿಸಿ ಈ ಕೇಂದ್ರಗಳಲ್ಲಿ ಹೊರತು ಪಡಿಸಿ ಬೇರೆ ಕಡೆ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ. ಸರಕಾರ ಈ ಬಗ್ಗೆ ಯಾವುದೇ ಲಿಂಕ್ ಕಳುಹಿಸುವುದಿಲ್ಲ. ದಯವಿಟ್ಟು ಯಾವುದೇ ಲಿಂಕ್ ಕ್ಲಿಕ್ ಮಾಡಿ ವಂಚನೆಗೆ ಒಳಗಾಗಬೇಡಿ ಎಂದು ಪ್ರಕಟಣೆ ತಿಳಿಸಿದೆ.