ಪ್ರಾಣವನ್ನೂ ಲೆಕ್ಕಿಸದೆ ಮಚ್ಚಿನಿಂದ ಹಲ್ಲೆ ನಡೆಸಿದ ಆರೋಪಿಯ ಹೆಡೆ ಮುರಿ ಕಟ್ಟಿದ ಕೇರಳದ ಸಿಂಘಂ ಬಗ್ಗೆ ವ್ಯಾಪಕ ಮೆಚ್ಚುಗೆ

ತಿರುವನಂತಪುರಂ: ಇಲ್ಲಿನ ಆರೋಪಿಯೊಬ್ಬ ಪೋಲೀಸ್ ಸಬ್ ಇನ್ಸ್‌ಪೆಕ್ಟರ್ ಮೇಲೆ ತಲವಾರಿನಿಂದ ಹಲ್ಲೆ ಮಾಡುತ್ತಿದ್ದು, ಅದನ್ನು ಸಮರ್ಥವಾಗಿ ಎದುರಿಸಿ, ಆರೋಪಿಯನ್ನು ಹೆಡೆಮುರಿ ಕಟ್ಟಿ ಪೊಲೀಸ್ ಜೀಪಿನಲ್ಲಿ ತಳ್ಳುತ್ತಿರುವ ವಿಡಿಯೋ ದೃಶ್ಯವೊಂದು ವೈರಲ್ ಆಗಿದ್ದು, ವಿಡೀಯೋದಲ್ಲಿದ್ದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನ ಸಮಯೋಚಿತ ಕ್ರಮಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿತ್ತು. ಆರೋಪಿ ಮಚ್ಚಿನಿಂದ ಹಲ್ಲೆ ನಡೆಸುತ್ತಿದ್ದರೂ ಪ್ರಾಣವನ್ನೂ ಲೆಕ್ಕಿಸದೆ ಆತನ ಕೈಯಿಂದ ಮಚ್ಚು ಕಸಿದು, ಆತನನ್ನು ಬಂಧಿಸಿದ ಸಬ್ ಇನ್ಸ್‌ಪೆಕ್ಟರ್ ಅರುಣ್ ಕುಮಾರ್ ಕೇರಳ ಸಿಂಘಂ ಆಗಿ ಹೊರಹೊಮ್ಮಿದ್ದಾರೆ.

ಕರ್ತವ್ಯದಲ್ಲಿದ್ದ ಪೊಲೀಸ್ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯನ್ನು ರಿಮಾಂಡ್ ಮಾಡಲಾಗಿದೆ ಎಂದು ವರದಿಯಾಗಿದೆ.

“ಜೂನ್ 12 ರಂದು, ನಾನು ಗಸ್ತು ಕರ್ತವ್ಯದಲ್ಲಿದ್ದಾಗ ಆರೋಪಿಯೊಬ್ಬ ನನ್ನ ವಾಹನವನ್ನು ನಿಲ್ಲಿಸಿದನು ಮತ್ತು ಯಾವುದೇ ಪ್ರಚೋದನೆ ಇಲ್ಲದೆ ನನ್ನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಲು ಪ್ರಯತ್ನಿಸಿದನು. ನಾನು ಅವನನ್ನು ಹಿಡಿದು ಆಯುಧವನ್ನು ವಶಪಡಿಸಿಕೊಂಡು ಠಾಣೆಗೆ ತಂದಿದ್ದೇನೆ. ಅವನನ್ನು ರಿಮಾಂಡ್ ಮಾಡಲಾಗಿದೆ. ನನ್ನ ಕೈಗೆ 7 ಹೊಲಿಗೆ ಹಾಕಲಾಗಿದ್ದು, ಯಾವುದೇ ಗಂಭೀರ ಗಾಯಗಳಿಲ್ಲ… ನನ್ನ ಸಮಯೋಚಿತ ಕ್ರಮಕ್ಕೆ ಡಿಜಿಪಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಸಬ್ ಇನ್ಸ್‌ಪೆಕ್ಟರ್ ಅರುಣ್ ಕುಮಾರ್ ಮಾಧ್ಯಮ ಸಂಸ್ಥೆ ಎ ಎನ್ ಐ ಗೆ ತಿಳಿಸಿದ್ದಾರೆ.

Source: ANI