ಅ. 3ರಂದು ಸಬ್-ಇನ್ಸ್ಪೆಕ್ಟರ್ ಲಿಖಿತ ಪರೀಕ್ಷೆ

ಉಡುಪಿ: ಪೊಲೀಸ್ ಸಬ್-ಇನ್ಸ್ಪೆಕ್ಟರ್ (ಸಿವಿಲ್) ಪುರುಷ ಮತ್ತು ಮಹಿಳಾ (ಎನ್‌ಕೆಕೆ & ಕೆಕೆ) ಹಾಗೂ ಸೇವಾನಿರತರನ್ನೊಳಗೊಂಡ 545 ಹುದ್ದೆಗಳಿಗೆ ನಡೆಸಲಾದ ಇಟಿ/ಪಿಎಸ್‌ಟಿ ಪರೀಕ್ಷೆಗಳಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಅಕ್ಟೋಬರ್ 3 ರಂದು ಲಿಖಿತ ಪರೀಕ್ಷೆ ನಡೆಸಲಾಗುವುದು.

ಪತ್ರಿಕೆ-1 ಮತ್ತು 2ನ್ನು ಕ್ರಮವಾಗಿ ಬೆ. 11 ರಿಂದ 12.30 ಮತ್ತು 3 ರಿಂದ 4.30 ರವರೆಗೆ ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ದಾವಣಗೆರೆ ಹಾಗೂ ತುಮಕೂರು ಕೇಂದ್ರಗಳಲ್ಲಿ ನಡೆಸಲಾಗುತ್ತಿದ್ದು, ಲಿಖಿತ ಪರೀಕ್ಷೆಯ ಕರೆ ಪತ್ರವನ್ನು ಅಧಿಕೃತ ವೆಬ್‌ಸೈಟ್ www.recruitment.ksp.gov.in ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಉಡುಪಿ ಪೊಲೀಸ್ ಅಧೀಕ್ಷಕರ ಪ್ರಕಟಣೆ ತಿಳಿಸಿದೆ.