ಉಡುಪಿ: ದಿ ಬಾರ್ಕೂರು ಎಜ್ಯುಕೇಶನಲ್ ಸೊಸೈಟಿಯ ಆಡಳಿತಕ್ಕೊಳಪಟ್ಟ ನೇಶನಲ್ ಐಟಿಐ ಯು ಉಡುಪಿ ಜಿಲ್ಲೆಯ ಪ್ರಥಮ ಐಟಿಐ ಎಂಬ ಗರಿಮೆಯೊಂದಿಗೆ 1/8/1984 ರಲ್ಲಿ ಪ್ರಾರಂಭವಾಯಿತು. ಅಂದಿನ ಆಡಳಿತ ಮಂಡಳಿಯ ದೂರದರ್ಶಿತ್ವದಿಂದ ಊರ ಮಹನೀಯರ ಸಹಕಾರದೊಂದಿಗೆ ಗ್ರಾಮೀಣ ಪ್ರದೇಶದಲ್ಲಿ ಪ್ರಾರಂಭವಾಗಿರುವ ನಮ್ಮ ಸಂಸ್ಥೆ ಬೆಳೆದು ಹೆಮ್ಮರವಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ನೀಡುವಲ್ಲಿ ಸಫಲತೆಯನ್ನು ಪಡೆದಿದೆ.
ಸಂಸ್ಥೆಗೆ “ಗ್ರೇಡಿಂಗ್ ಮೆಥಡಾಲಜಿ”ಯಲ್ಲಿ ಉಡುಪಿ ಜಿಲ್ಲೆಯಲ್ಲೇ ಪ್ರಥಮ:
ಭಾರತ ದೇಶದಲ್ಲಿನ ಐಟಿಐ ಕಾಲೇಜ್ ಗಳ ಫಲಿತಾಂಶ, ವಿದ್ಯಾರ್ಥಿಗಳ ದಾಖಲಾತಿ, ಶೈಕ್ಷಣಿಕ ಗುಣಮಟ್ಟ ಹಾಗೂ ಸಂಸ್ಥೆಗಳ ಗುಣಮಟ್ಟವನ್ನು ಪರಿಗಣಿಸಿ ಭಾರತ ಸರಕಾರದ ಕೌಶಲ್ಯಾಭಿವ್ರಧ್ಧಿ ಮತ್ತು ಉದ್ಯಮಶೀಲತೆ ಇಲಾಖೆಯ 2025-2026 ನೇ ಸಾಲಿನ ಐಟಿಐ “ಗ್ರೇಡಿಂಗ್ ಮೆಥಡಾಲಜಿ”ಯಲ್ಲಿ ನಮ್ಮ ಸಂಸ್ಥೆಯು ಉಡುಪಿ ಜಿಲ್ಲೆಯಲ್ಲೇ ಪ್ರಥಮ ಸ್ಥಾನವನ್ನು ಪಡೆದಿರುತ್ತದೆ.
ವಿದ್ಯಾರ್ಥಿಗಳಿಗೆ ಸಂಸ್ಥೆಯಿಂದ ಶೇ.100 ಉದ್ಯೋಗ ಸಹಾಯ:
2025ರಲ್ಲಿ ಕೂಡ ನಮ್ಮ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿ ಪೂರೈಸಿದ ವಿದ್ಯಾರ್ಥಿಗಳಿಗೆ ಶೇ.100 ಉದ್ಯೋಗಾವಕಾಶ ಆಗಿರುವುದು ನಮಗೆ ಹೆಮ್ಮೆಯ ವಿಷಯವಾಗಿರುತ್ತದೆ. ಪ್ರಸಿದ್ಧ ಕಾರು ಉತ್ಪಾದನಾ ಸಂಸ್ಥೆಯಾದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಪ್ರೈವೇಟ್ ಲಿಮಿಟೆಡ್. ಸುಮಾರು 10 ವರ್ಷಗಳಿಂದ ನಮ್ಮ ಸಂಸ್ಥೆಯಲ್ಲೇ ಕ್ಯಾಂಪಸ್ ಇಂಟರ್ವ್ಯೂ ಮಾಡುತ್ತಾ ಬಂದಿರುತ್ತಾರೆ. ಈ ವರ್ಷ ಈ ಕೆಳಗಿನ ಸಂಸ್ಥೆಗಳಿಂದ ಕ್ಯಾಂಪಸ್ ಇಂಟರ್ವ್ಯೂ ನಡೆದಿರುತ್ತದೆ.











ನಮ್ಮ ಸಂಸ್ಥೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಈ ವರ್ಷ ಎಂಪ್ಲಾಯ್ಮೆಂಟ್ ಎಕ್ಸ್ಚೇಂಜ್ ಅವರನ್ನು ಖುದ್ದಾಗಿ ಸಂಸ್ಥೆಗೆ ಕರೆಸಿ ವಿದ್ಯಾರ್ಥಿಗಳ ರಿಜಿಸ್ಟ್ರೇಷನ್ ಮಾಡಿಸಿರುತ್ತೇವೆ.
ಸಂಸ್ಥೆಯ ಅಭಿವ್ರಧ್ಧಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ – ವೆಂಕಟೇಶ ಕ್ರಮಧಾರಿ:
ನಮ್ಮ ನೇಶನಲ್ ಐಟಿಐ ಸಂಸ್ಥೆಯನ್ನು ಅಭಿವ್ರಧ್ಧಿಯ ಪಥದಲ್ಲಿ ನಡೆಸುವಲ್ಲಿ ಮುಖ್ಯ ಕಾರಣೀಕರ್ತರಾದ ನಮ್ಮ ಆಡಳಿತ ಮಂಡಳಿಯ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಎಲ್ಲ ಪದಾಧಿಕಾರಿಗಳು ಮತ್ತು ನಮ್ಮ ಸಂಸ್ಥೆಯ ಸಂಚಾಲಕರು. ಇವರೆಲ್ಲರಿಗೆ ನಮ್ಮ ಸಂಸ್ಥೆಯ ಪರವಾಗಿ ತುಂಬು ಹ್ರದಯದ ಧನ್ಯವಾದಗಳು. ಸಂಸ್ಥೆಯ ಏಳಿಗೆಯ ಬಗ್ಗೆ ಹಗಲಿರುಳೂ ಚಿಂತನೆಯಲ್ಲಿದ್ದು,ಉತ್ತಮ ಫಲಿತಾಂಶಗಳನ್ನು ಪಡೆಯುವಲ್ಲಿ ತಮ್ಮ ಶಕ್ತಿಮೀರಿ ಪ್ರಯತ್ನ ಮಾಡಿದ ಎಲ್ಲ ಬೋಧಕ ಸಿಬ್ಬಂದಿವರ್ಗದವರು ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರಿಗೆ ವೈಯಕ್ತಿಕವಾಗಿ ತುಂಬು ಹ್ರದಯದ ಧನ್ಯವಾದಗಳನ್ನು ಸಲ್ಲಿಸುತ್ತೇನೆ.ಹಾಗೂ ಸಂಸ್ಥೆಯ ಸರ್ವತೋಮುಖ ಅಭಿವೃದ್ಧಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ನಮ್ಮ ಸಂಸ್ಥೆಯ ಬೆನ್ನೆಲುಬು ಆಗಿರುವ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾದಿಕಾರಿಗಳು ಹಾಗೂ ಸರ್ವಸದಸ್ಯರುಗಳಿಗೆ ಸಂಸ್ಥೆಯ ಪರವಾಗಿ ತುಂಬು ಹೃದಯದ ಧನ್ಯವಾದಗಳು.
-ವೆಂಕಟೇಶ ಕ್ರಮಧಾರಿ
ಪ್ರಾಚಾರ್ಯರು, ನೇಶನಲ್ ಐಟಿಐ ಕಾಲೇಜ್, ಹೇರಾಡಿ. ಬಾರ್ಕೂರು,
ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ
ತಾಂತ್ರಿಕ ಶಿಕ್ಷಣ ಸಂಸ್ಥೆಗೆ ಸೇರಲು ಬಯಸುವ ವಿದ್ಯಾರ್ಥಿಗಳಿಗೆ ಕೆಲವೇ ಸೀಟುಗಳು ಲಭ್ಯವಿದ್ದು, ಆಸಕ್ತರು ಈ ಕೊಡಲೇ ಸಂಪರ್ಕಿಸಬೇಕೆಂದು ಸಂಸ್ಥೆಯು ಪ್ರಕಟಣೆ ತಿಳಿಸಿದೆ.








































