ಬ್ರಹ್ಮಾವರ: ಎಸ್.ಎಮ್.ಎಸ್ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ

ಬ್ರಹ್ಮಾವರ: ಎಸ್ ಎಮ್.ಎಸ್. ಕಾಲೇಜಿನ 2022-23ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭವು ಬುಧವಾರದಂದು ಕಾಲೇಜಿನ ಡಾ. ಬಿ.ವಿ.ಶೆಟ್ಟಿ ಸಭಾಂಗಣದಲ್ಲಿ ನೆರವೇರಿತು.

ಕಾಲೇಜಿನ ಸಂಚಾಲಕ ರೆ.ಫಾ. ಎಮ್.ಸಿ. ಮಥೈ ಇವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.

ಉದ್ಘಾಟಕರಾಗಿ ಆಗಮಿಸಿದ ಎಸ್.ಡಿ.ಪಿ.ಟಿ ಕಾಲೇಜು ಮಂದಾರ್ತಿಯ ಹಿಂದಿ ಉಪನ್ಯಾಸಕಿ ಶ್ರೀಮತಿ ರೇಷ್ಮಾ ಶೆಟ್ಟಿ ಇವರು ದೀಪ ಬೆಳಗಿಸಿ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ, ತಮ್ಮ ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿ ಸಂಘದೊಂದಿಗೆ ಕ್ರಿಯಾಶೀಲರಾಗಿ ದುಡಿದ ನೆನಪುಗಳನ್ನು ಹಂಚಿಕೊಳ್ಳುತ್ತಾ ವಿದ್ಯಾರ್ಥಿಗಳಲ್ಲಿ ಆತ್ಮಸ್ಠೈರ್ಯವನ್ನು ಹೆಚ್ಚಿಸುವಲ್ಲಿ ವಿದ್ಯಾರ್ಥಿ ಸಂಘದ ಪಾತ್ರ ಮಹತ್ವದ್ದಾಗಿದೆ ಎಂದರು.

ವಿದ್ಯಾರ್ಥಿ ಸಂಘದ ನಿರ್ದೇಶಕ ಡಾ. ಮಂಜುನಾಥ್ ಉಡುಪ, ಕಾಲೇಜಿನ ಪ್ರಾಂಶುಪಾಲ ಪ್ರಸನ್ನ ಶೆಟ್ಟಿ, ಉಪಪ್ರಾಂಶುಪಾಲೆ ಡಾ. ವಿದ್ಯಾಲತಾ, ವಿದ್ಯಾರ್ಥಿ ಸಂಘದ ನಾಯಕ ದಿವ್ಯಾಂಶ್, ಕಾರ್ಯದರ್ಶಿ ಆರಾಧ್ಯ ಕೃಷ್ಣ, ಉಪನಾಯಕ ನವನೀತ್, ಉಪನಾಯಕಿ ಪ್ರೀತಿ, ಜೊತೆಕಾರ್ಯದರ್ಶಿ ಅವನೀಶ್ ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರಾದ ಧರಿತ್ರಿ ಹಾಗೂ ಸಿಂಚನಾ ಕಾರ್ಯಕ್ರಮವನ್ನು ನಿರೂಪಿಸಿದರು.