ಪ್ರಾಜೆಕ್ಟ್ ಮಾನಸ್: ಅಮೇರಿಕಾದಲ್ಲಿ ನಡೆದ ಡ್ರೋನ್ ಸ್ಪರ್ಧೆಯಲ್ಲಿ ಮಿಂಚಿದ ಮೈಟ್-ಮಾಹೆ ವಿದ್ಯಾರ್ಥಿಗಳ ತಂಡ

ಮಣಿಪಾಲ: ಅಮೇರಿಕಾದಲ್ಲಿ ನಡೆದ ಡೋನ್ ಸ್ಪರ್ಧೆಯಲ್ಲಿ ಎಂಐಟಿ-ಮಾಹೆಯ ವಿದ್ಯಾರ್ಥಿಗಳ ತಂಡ ಮಿಂಚಿ ಜಿಲ್ಲೆಗೆ ಕೀರ್ತಿ ತಂದಿದೆ. ತಂಡವು ಜೂನ್ 15 ರಿಂದ18 ರವರೆಗೆ ಸೇಂಟ್ ಮೇರಿಸ್, ಮೇರಿಲ್ಯಾಂಡ್, ಯು.ಎಸ್.ಎ ನಲ್ಲಿ ನಡೆದ AUVSI SUAS – 2022 (ಅಸೋಸಿಯೇಷನ್ ​​ಫಾರ್ ಅನ್ ಮ್ಯಾನ್ಡ್ ವೆಹಿಕಲ್ ಸಿಸ್ಟಮ್ಸ್ ಅಂತರಾಷ್ಟ್ರೀಯ ವಿದ್ಯಾರ್ಥಿ ಮಾನವರಹಿತ ವೈಮಾನಿಕ ವ್ಯವಸ್ಥೆಗಳು) ಇದರಲ್ಲಿ ಭಾಗವಹಿಸಿತ್ತು. ಪ್ರಪಂಚದಾದ್ಯಂತ ಸ್ಪರ್ಧಿಸಿದ 71 ತಂಡಗಳ ಪೈಕಿ ಪ್ರಾಜೆಕ್ಟ್ ಮಾನಸ್ 18 ನೇ ಶ್ರೇಯಾಂಕವನ್ನು ಪಡೆದಿದೆ. ತಂಡವು ಫ್ಲೈಟ್ ರೆಡಿನೆಸ್ ರಿವ್ಯೂ ಶ್ರೇಣಿಯಲ್ಲಿ 2 ನೇ ಸ್ಥಾನದಲ್ಲಿತ್ತು.

2002 ರಿಂದ ವಾರ್ಷಿಕವಾಗಿ AUVSI SUAS ಅನ್ನು ನಡೆಸಲಾಗುತ್ತದೆ ಮತ್ತು ವಿದ್ಯಾರ್ಥಿಗಳು ಮಾನವರಹಿತ ವೈಮಾನಿಕ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲು, ಸಂಯೋಜಿಸಲು, ವರದಿ ಮಾಡಲು ಮತ್ತು ಪ್ರದರ್ಶಿಸಲು ಅವಕಾಶ ನೀಡಲಾಗುತ್ತದೆ. ಸ್ವಾಯತ್ತ ಹಾರಾಟ ಮತ್ತು ನ್ಯಾವಿಗೇಷನ್ ಸಾಮರ್ಥ್ಯವನ್ನು ಹೊಂದಿರುವ, ಆನ್‌ಬೋರ್ಡ್ ಪೇಲೋಡ್ ಸಂವೇದಕಗಳ ಮೂಲಕ ರಿಮೋಟ್ ಸೆನ್ಸಿಂಗ್ ಮತ್ತು ನಿರ್ದಿಷ್ಟ ಕಾರ್ಯಗಳ ಕಾರ್ಯಗತಗೊಳಿಸುವಿಕೆ ಹೊಂದಿರುವ ಡ್ರೋನ್ ಗಳ ಹಾರಾಟ ನಡೆಸಲಾಗುತ್ತದೆ.

ತಂಡವು ಅಭಿವೃದ್ಧಿಪಡಿಸಿದ 6 ಅಡಿ ಅಗಲದ UAS (ಮಾನವರಹಿತ ವೈಮಾನಿಕ ವ್ಯವಸ್ಥೆ) ಡ್ರೋನ್, ಸ್ವಾಯತ್ತ ಮೋಡ್‌ನಲ್ಲಿ, ಅಂದರೆ, ಸಂಪೂರ್ಣವಾಗಿ ಮಾನವ ಹಸ್ತಕ್ಷೇಪವಿಲ್ಲದೆ ಕಾರ್ಯಾಚರಿಸಬಲ್ಲದು. ಕೇವಲ ಹಸ್ತಚಾಲಿತ ಮೋಡ್‌ನಲ್ಲಿ, ರೇಡಿಯೋ ಫ್ರೀಕ್ವೆನ್ಸಿ ಸಾಧನ (RFD) ವನ್ನು ಡ್ರೋನ್‌ನ ಹಾರಾಟವನ್ನು ನ್ಯಾವಿಗೇಟ್ ಮಾಡಲು ಬಳಸಲಾಯಿತು. ಕಾರ್ಯಕ್ರಮದಲ್ಲಿ ಇದುವೆ ಅವರ ಧ್ಯೇಯ ಕಾರ್ಯವಾಗಿತ್ತು.

ವಿದ್ಯಾರ್ಥಿಗಳ ಈ ಸಾಧನೆಯನ್ನು ಎಂಐಟಿ ಮತ್ತು ಮಾಹೆ ವಿಶ್ವವಿದ್ಯಾನಿಲಯದ ಆಡಳಿತ ವರ್ಗದವರು ಕೊಂಡಾಡಿ, ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.