ಹೆಮ್ಮಾಡಿ: ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ನ.18 ರಂದು ವಿದ್ಯಾರ್ಥಿ ಕವಿಗೋಷ್ಠಿ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಗಣೇಶ ಮೊಗವೀರ್ ಇವರು ವಹಿಸಿದ್ದರು.
ರಾಜ್ಯ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಪುಂಡಲೀಕ ನಾಯಕ್ ನಾಯ್ಕನಕಟ್ಟೆ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ವಿದ್ಯಾರ್ಥಿ ಸ್ವರಚಿಸಿ ವಾಚಿಸಿದ ಕವನಗಳನ್ನು ವಿಮರ್ಶಿಸಿ ವಿದ್ಯಾರ್ಥಿ ಪ್ರತಿಭೆಗಳನ್ನು ಪ್ರೋತ್ಸಾಹಿಸಿ, ಭವಿಷ್ಯದಲ್ಲಿ ನೀವು ಯಾವುದೇ ಉನ್ನತ ಉದ್ಯೋಗ ಪಡೆದರೂ ಈ ನೆಲದ ಭಾಷೆಯ ಅಭಿಮಾನ ನಿಮಗಿರಲಿ ಹಾಗೂ ನಿಮ್ಮ ಬರವಣಿಗೆಯ ಸಾಮರ್ಥ್ಯ ಇನ್ನೂ ಹೆಚ್ಚಿಸಿ ಎಂದು ಕರೆ ನೀಡಿದರು.
ಸಮಾರಂಭದಲ್ಲಿ ಜನತಾ ಪ್ರೌಢಶಾಲೆ ಹೆಮ್ಮಾಡಿಯ ಮುಖ್ಯ ಶಿಕ್ಷಕ ಮಂಜು ಕಾಳಾವರ, ಲೇಜಿನ ಉಪಪ್ರಾಂಶುಪಾಲರು, ಬೋಧಕ, ಬೋಧಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಶಿಫಾಲಿ,ಭೂಷಣ್, ಪ್ರಣವ್ ಅಡಿಗ,ವರ್ಷಾ ರವಿಶಂಕರ್ ಸೃಜನ್,ಐಶ್ವರ್ಯ ವೈದ್ಯ
,ದರ್ಶನ್,ಸಾಲ್ವಿನ್ ಮನೋಜ್, ಪಲ್ಲವಿ,ಶಶಿಕಲಾ ಹಾಗೂ ಉನ್ನತಿ ಗೌಡ ಕವಿಗೋಷ್ಠಿಯಲ್ಲಿ ಸ್ವರಚಿತಕವನಗಳನ್ನು ವಾಚಿಸಿದರು.
ಕನ್ನಡ ಉಪನ್ಯಾಸಕ ಉದಯ್ ನಾಯ್ಕ್ ಅತಿಥಿಗಳನ್ನು ಪರಿಚಯಿಸಿ, ವಿದ್ಯಾರ್ಥಿಗಳಾದ ವರ್ಣಾ ಪ್ರಾರ್ಥಿಸಿ, ಶ್ರೀಧರ ಹೆಗ್ಡೆ ಸ್ವಾಗತಿಸಿ, ರಕ್ಷಿತಾ ಹಾಗೂ ಧನ್ಯ ಕಾರ್ಯಕ್ರಮ ನಿರೂಪಿಸಿ, ನಿಖಿಲ್ ವಂದಿಸಿದರು.