ಸಂಪುಟ ರಚನೆ: ಘಟಾನುಘಟಿ ನಾಯಕರಿಗೆ ಕೊಕ್

ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಸಂಪುಟದಿಂದ ಘಟಾನುಘಟಿಗಳನ್ನು ಕೈಬಿಡಲಾಗಿದೆ.
ಅರವಿಂದ ಲಿಂಬಾವಳಿ, ಲಕ್ಷ್ಮಣ ಸವದಿ, ಸಿ.ಪಿ. ಯೋಗೇಶ್ವರ್, ಎಸ್. ಸುರೇಶ್ ಕುಮಾರ್, ವಲಸಿಗಾರದ ಶ್ರೀಮಂತ್ ಪಾಟೀಲ್, ಆರ್. ಶಂಕರ್ ಅವರಿಗೆ ಸಚಿವ ಸ್ಥಾನದಿಂದ ಕೊಕ್ ನೀಡಲಾಗಿದೆ.

ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಅರವಿಂದ ಬೆಲ್ಲದ, ಬಸವನಗೌಡ ಪಾಟೀಲ ಯತ್ನಾಳ್‌, ರೇಣುಕಾಚಾರ್ಯ, ರಾಜೂ ಗೌಡ ಅವರ ಹೆಸರೂ ಸಚಿವರಾಗುವವರ ಪಟ್ಟಿಯಲ್ಲಿ ಇಲ್ಲ.