ಉಡುಪಿ: ಉಡುಪಿ ಹಾಗೂ ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಒಟ್ಟು 33 ಕಾರುಗಳ ಟಿಂಟ್ ಗ್ಲಾಸ್ ಗಳನ್ನು ಮತ್ತು 21 ವಾಹನಗಳ ಕರ್ಕಶ ಹಾರ್ನ್ ಗಳನ್ನು ತೆರವುಗೊಳಿಸಿದರು. ಟಿಂಟ್ ಗ್ಲಾಸ್ ಮತ್ತು ಕರ್ಕಶ ಹಾರ್ನ್ ಹಾಕಿದವರು ಕೂಡಲೆ ತೆರವುಗೊಳಿಸಬೇಕು ಇಲ್ಲವಾದಲ್ಲಿ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚೀಂದ್ರ ತಿಳಿಸಿದ್ದಾರೆ.
ಅಲ್ಲದೆ, ದ್ವಿಚಕ್ರ ವಾಹನಗಳಲ್ಲಿ ಡಿಫೆಕ್ಟಿವ್ ಸೈಲೆನ್ಸರ್ ಗಳನ್ನು ಅಳವಡಿಸಿ ಕರ್ಕಶ ಶಬ್ದ ಮಾಡಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ಮೋಟಾರ್ ಸೈಕಲ್ ಗಳನ್ನು ಮಣಿಪಾಲ ಪೊಲೀಸರು ವಿಶೇಷ ಕಾರ್ಯಚರಣೆ ಮಾಡಿ ವಶಕ್ಕೆ ಪಡೆದು ಒಟ್ಟು 45 ಡಿಫೆಕ್ಟಿವ್ ಸೈಲೆನ್ಸರ್ ಗಳನ್ನು ನಿಷ್ಕ್ರಿಯಗೊಳಿಸಿರುವುದಾಗಿಯೂ ಎಸ್ಪಿ ತಿಳಿಸಿದ್ದಾರೆ.