ಪಾಂಗಾಳದ ಇನ್ನಂಜೆಯಲ್ಲಿ ಶಿಲಾಯುಗದ ಗುಹಾಸಮಾಧಿ ಪತ್ತೆ!

ಉಡುಪಿ: ಪಾಂಗಾಳದ ಇನ್ನಂಜೆಯ ಸಮೀಪ ಮಂಡೆಡಿ ಬಾಕ್ಯರ್ ಎಂಬಲ್ಲಿ ಶಿಲಾಯುಗಕ್ಕೆ ಸೇರಿದೆ ಎನ್ನಲಾದ ಗುಹೆ ಪತ್ತೆಯಾಗಿದೆ.

ಈ ಗುಹಾಸುರಂಗದೊಳಗೆ ಕಲ್ಲುಚಪ್ಪಡಿಗಳು ಕಂಡುಬಂದಿದೆ. ಆದರೆ ಈ ಗುಹೆಯನ್ನು ಸ್ಥಳೀಯರು ಅವಘಡ ಆಗಬಾರದೆಂಬ ಕಾರಣಕ್ಕೆ ಕಲ್ಲು ಹಾಕಿ ಮುಚ್ಚಿದ್ದರು. ಇದೀಗ ಮಳೆಗೆ ಗುಹೆಯ ದ್ವಾರದ ಮಣ್ಣು ಕುಸಿದಿದ್ದು, ಇದರಿಂದ ಗುಹೆ ಇರುವುದು ಬೆಳಕಿಗೆ ಬಂದಿದೆ.

ಇದು ಗುಹಾ ಸುರಂಗವೋ?., ಶಿಲಾಗೋರಿಯೋ?. ಅಥವಾ ಗುಹಾ ಸಮಾಧಿಯೋ ಎಂಬುವುದು ಕುತೂಹಲ ಹುಟ್ಟಿದೆ. ಇದನ್ನು ಇತಿಹಾಸ ತಜ್ಞರು ಭೇಟಿ ನೀಡಿ, ಸ್ಪಷ್ಟ ಮಾಹಿತಿ ನೀಡಬೇಕಾಗಿದೆ.

ಈ ಗುಹೆ ಕಂಡುಬಂದಿರುವ ಸಮೀಪದಲ್ಲಿಯೇ ಕುಂಜಿರೊಟ್ಟು ದೈವಸ್ಥಾನ, ರಾಜನ್ ದೈವಸ್ಥಾನ, ಪಾಂಗಳದ ಆಲಡೇ ಸ್ಥಾನ ಕೂಡ ಇದೆ. ಶಿರ್ವ ಎಂಎಸ್ ಆರ್ ಎಸ್ ಕಾಲೇಜಿನ ಪುರಾತತ್ವ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಟಿ. ಮುರುಗೇಶಿ ಅವರು ಇದೊಂದು ಶಿಲಾಯುಗದ ಸಮಾಧಿ ಎಂದು ಮೇಲ್ನೋಟಕ್ಕೆ ತಿಳಿಸಿದ್ದಾರೆ.

ಈ ಬಗ್ಗೆ ಹೆಚ್ಚಿನ ಅಧ್ಯಯನದಿಂದ ಮಾಡಿ ಸ್ಪಷ್ಟ ಮಾಹಿತಿ ನೀಡಬಹುದು. ಸ್ಥಳಕ್ಕೆ ಭೇಟಿ ನೀಡಿ ಉತ್ಖನನ ನಡೆಸಿದ ಬಳಿಕ ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಕಲೆಹಾಕಬಹುದೆಂದು ಅವರು ಹೇಳಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೆಟ್ಟು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.