ಆಸ್ತಿಗಾಗಿ ಮೂರನೇ ಮಹಡಿಯಿಂದ ಮಗುವನ್ನು ತಳ್ಳಿ ಕೊಲೆಗೈದ ಮಲತಾಯಿ: ಸಿಸಿಟಿವಿಯಲ್ಲಿ ಸೆರೆಯಾಯ್ತು ಭಯಾನಕ ಕೃತ್ಯ!

ಬೀದರ್: ಮಲ ಮಗಳಿಗೂ ಆಸ್ತಿ ಹಂಚಿಕೆ ಆಗುತ್ತದೆ ಎಂಬ ಕಾರಣಕ್ಕೆ ಮಹಿಳೆಯೊಬ್ಬಳು ಮೂರು ಮಹಡಿ ಕಟ್ಟಡದ ಮೇಲಿಂದ ಬಾಲಕಿಯನ್ನು ತಳ್ಳಿ ಕೊಲೆ ಮಾಡಿದ ಘಟನೆ ನಗರದ ನ್ಯೂ ಆದರ್ಶ ಕಾಲನಿಯಲ್ಲಿ ಇತ್ತೀಚೆಗೆ ನಡೆದಿದೆ.

ಸಾನ್ವಿ (6) ಮೃತ ಬಾಲಕಿ. ಪ್ರಕರಣದಲ್ಲಿ ಆರೋಪಿಯನ್ನು ರಾಧಾ ಎಂದು ಗುರುತಿಸಲಾಗಿದೆ. ಆಗಸ್ಟ್​​ 27ರಂದು ಮಲತಾಯಿ ರಾಧಾ ಬಾಲಕಿಗೆ ಆಟವಾಡಿಸುವ ನೆಪದಲ್ಲಿ ಮೂರನೇ ಮಹಡಿಗೆ ಕರೆದೊಯ್ದಿದ್ದು, ಯಾರಿಗೂ ಕಾಣದಂತೆ ತಳ್ಳಿ ಕೊಲೆ ಮಾಡಿದ್ದಳು. ಬಾಲಕಿಯು ಆಯತಪ್ಪಿ ಬಿದ್ದಿದ್ದಾಳೆ ಎಂದು ನಂಬಿದ್ದರು. ಈ ಬಗ್ಗೆ ಆಕಸ್ಮಿಕವಾಗಿ ಬಿದ್ದ ಬಾಲಕಿ ಮೃತಪಟ್ಟಿದ್ದಾಳೆ ಎಂದು ತಂದೆ ಸಿದ್ಧಾಂತ ನೀಡಿದ ದೂರಿನ ಮೇರೆಗೆ ಗಾಂಧಿಗಂಜ್ ಪೊಲೀಸ್​ ಠಾಣೆಯಲ್ಲಿ ಯುಡಿಆರ್​ ಪ್ರಕರಣ ದಾಖಲಾಗಿತ್ತು.

ಕೆಲ ದಿನಗಳ ಬಳಿಕ ಸೆಪ್ಡಂಬರ್​ 13ರಂದು ಸಾರ್ವಜನಿಕರೊಬ್ಬರು ನಮಗೆ ಸಿಸಿಟಿವಿ ದೃಶ್ಯಗಳನ್ನು ತಂದು ಕೊಟ್ಟರು. ವಿಡಿಯೋ ಪರಿಶೀಲಿಸಿದಾಗ, ಬಾಲಕಿ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿಲ್ಲ. ಮೇಲ್ಮಹಡಿಯಲ್ಲಿ ಖುರ್ಚಿ ಇಟ್ಟು ಅದರ ಮೇಲೆ ಬುಟ್ಟಿ ಉಲ್ಟಾ ಇಟ್ಟು ಸಾನ್ವಿಯನ್ನ ಕೂರಿಸಿರೊದು ಪತ್ತೆಯಾಗಿದೆ. ಸಿಸಿಟಿವಿ ದೃಶ್ಯ ಆಧರಿಸಿ ಮೃತ ಬಾಲಕಿ ಅಜ್ಜಿ, ರಾಧಾ ವಿರುದ್ಧ ದೂರು ನೀಡಿದ್ದು, ಈ ದೂರು ದಾಖಲಿಸಿಕೊಂಡು ಪೊಲೀಸರು ಆರೋಪಿ ರಾಧಾಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ತಾನು ಕೊಲೆ ಮಾಡಿರುವ ಕೃತ್ಯವನ್ನು ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಗುವಿನ ತಂದೆಗೆ ಆರೋಪಿ ಮಹಿಳೆಯು ಎರಡನೇ ಹೆಂಡತಿಯಾಗಿದ್ದಾಳೆ. ಆತನ ಮೊದಲ ಪತ್ನಿ 2019ರಲ್ಲಿ ಮೃತಪಟ್ಟಿದ್ದಾರೆ. ಬಳಿಕ 2023ರಲ್ಲಿ ಎರಡನೇ ಮದುವೆ ಮಾಡಿಕೊಂಡಿದ್ದಾರೆ. ಇವರಿಗೆ ಅವಳಿ ಮಕ್ಕಳಾಗಿದ್ದಾರೆ. ತನ್ನ ಮಕ್ಕಳಿಗೆ ಸಿಗಬೇಕಾದ ಆಸ್ತಿಯಲ್ಲಿ, ಈ ಮಲಮಗಳಿಗೂ ಕೂಡ ನೀಡಬೇಕಾಗುತ್ತದೆ. ಆಸ್ತಿ ಹಂಚಿಕೆಯಲ್ಲಿ ಈ ಬಾಲಕಿಯು ಅಡ್ಡಬರಬಾರದು, ತನ್ನ ಮಕ್ಕಳಿಗೇ ಎಲ್ಲಾ ಆಸ್ತಿ ಸಿಗಬೇಕೆಂದು ಈ ಕೊಲೆ ಮಾಡಿರುವುದಾಗಿ ಪೊಲೀಸ್​ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಮಾಹಿತಿ ನೀಡಿದರು.