ಬೆಂಗಳೂರು: ಕೋವಿಡ್ ಎರಡನೇ ಅಲೆಯನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಕಠಿಣ ನಿಯಮ ಜಾರಿಗೊಳಿಸಿದ್ದು, ರಾಜ್ಯಾದ್ಯಾಂತ ನಾಳೆಯಿಂದ (ಏ. 21) ಮೇ 4ರ ವರೆಗೆ ಹೊಸ ಮಾರ್ಗಸೂಚಿ ಜಾರಿಯಲ್ಲಿ ಇರಲಿದೆ. ಅದರ ಜೊತೆಗೆ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ವೀಕೆಂಡ್ ಕರ್ಪ್ಯೂ ಜಾರಿಗೊಳಿಸಿದೆ. ಶುಕ್ರವಾರ ರಾತ್ರಿ 9ರಿಂದ ಸೋಮವಾರ ಬೆಳಿಗ್ಗೆ 6ರ ವರೆಗೆ ವೀಕೆಂಡ್ ಕರ್ಪ್ಯೂ ಜಾರಿಯಲ್ಲಿರಲಿದೆ. ಶನಿವಾರ ಭಾನುವಾರ ದಿನಸಿ, ತರಕಾರಿ, ಹಾಲು ಅಂಗಡಿಗಳು 6ರಿಂದ 10ರವರೆಗೆ ಮಾತ್ರ ಓಪನ್ ಇರಲಿದೆ.
ನೈಟ್ ಕರ್ಪ್ಯೂ ಅವಧಿ ಹೆಚ್ಚಳ:
ರಾಜ್ಯಾದ್ಯಾಂತ ನೈಟ್ ಕರ್ಪ್ಯೂ ವಿಸ್ತರಿಸಿದ್ದು, ನಾಳೆಯಿಂದ (ಏ. 21) ಮೇ 4ರ ವರೆಗೆ ರಾತ್ರಿ 9ರಿಂದ ಬೆಳಿಗ್ಗೆ 6ರ ವರೆಗೆ ನೈಟ್ ಕರ್ಪ್ಯೂ ಜಾರಿಯಲ್ಲಿ ಇರಲಿದೆ.
ಹೊಸ ಮಾರ್ಗಸೂಚಿ ವಿವರಗಳು.
*ರಾಜ್ಯದಲ್ಲಿ ಸೆಕ್ಷನ್ 144 ಜಾರಿ, ಮದುವೆ ಸಮಾರಂಭಗಳಿಗೆ ಕೇವಲ 50 ಜನರಿಗೆ ಅವಕಾಶ.
*ಶನಿವಾರ ಭಾನುವಾರ ದಿನಸಿ, ತರಕಾರಿ, ಹಾಲು ಅಂಗಡಿಗಳು 6ರಿಂದ 10ರವರೆಗೆ ಮಾತ್ರ ಓಪನ್
*ಶಾಲೆ ಕಾಲೇಜು, ಸಿನಿಮಾ ಹಾಲ್, ಮಾಲ್, ಸ್ವಿಮಿಂಗ್ ಪೂಲ್, ಧಾರ್ಮಿಕ ಸ್ಥಳ, ಹೋಟೆಲ್ ಬಂದ್
*ಬಾರ್, ಲಿಕರ್ ಶಾಪ್ ನಲ್ಲಿ ಪಾರ್ಸಲ್‌ಗೆ ಮಾತ್ರ ಅವಕಾಶ.
*ಕಟ್ಟಡ ನಿರ್ಮಾಣ ಕಾರ್ಯಕ್ಕೆ ಅನುಮತಿ ನೀಡಲಾಗಿದೆ.
*ಬೆಂಗಳೂರಿನ ಮಾರುಕಟ್ಟೆಗಳನ್ನು 14 ದಿನಗಳವರೆಗೂ ಬೇರೆ ಕಡೆಗೆ ಸ್ಥಳಾಂತರಿಸಲಾಗಿದೆ.












