ಮಂಗಳೂರು: ಕರ್ನಾಟಕ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳ ಆಡಳಿತ ಮಂಡಳಿ (KUPMA) ವತಿಯಿಂದ ರಾಜ್ಯಮಟ್ಟದ ‘ಪದವಿ ಪೂರ್ವ ಶಿಕ್ಷಣ-ಮುಕ್ತ ಸಮಾವೇಶ 2024’ವು ಜನವರಿ 05 ಶುಕ್ರವಾರ ಮತ್ತು 06 ಶನಿವಾರ 2024 ರಂದು ಆಳ್ವಾಸ್ ಕಾಲೇಜು, ವಿದ್ಯಾಗಿರಿ ಮೂಡುಬಿದಿರೆ ಇಲ್ಲಿ ನಡೆಯಲಿದೆ.
ಜ. 05 ಶುಕ್ರವಾರ ಬೆಳಿಗ್ಗೆ 11.30 ರಿಂದ 12.30 ರವರೆಗೆ ನೋಂದಣಿ, ಮಧ್ಯಾಹ್ನ 12.30 ರಿಂದ 02.00 ರ ವರೆಗೆ ಊಟ ಮತ್ತು ನೆಟ್‌ವರ್ಕಿಂಗ್, ಮಧ್ಯಾಹ್ನ 02.00 ರಿಂದ 04.00 ರವರೆಗೆ ಉದ್ಘಾಟನಾ ಅಧಿವೇಶನ, ಸಂಜೆ 04.00 ರಿಂದ ಮೊದಲ ಪ್ಯಾನಲ್ ಚರ್ಚೆ (ವಿಷಯ: ‘ಕುಪ್ಮಾದ ಗುರಿ ಮತ್ತು ಉದ್ದೇಶಗಳು’), ಎರಡನೆಯ ಅಧಿವೇಶನ ಸಂಜೆ 05.30 ರಿಂದ 07.30 ರವರೆಗೆ ಪ್ಯಾನಲ್ ಚರ್ಚೆ (ವಿಷಯ: ‘ನಿಮ್ಮ ಜಿಲ್ಲೆಯಲ್ಲಿ ಕುಪ್ಮಾದ ಬಲವಾದ ಸಂಘವನ್ನು ನಿರ್ಮಿಸುವುದು’), ಜನವರಿ 6 ರ ಶನಿವಾರ ಬೆಳಿಗ್ಗೆ 9.30 ರಿಂದ 10.30 ರವರೆಗೆ ಪ್ಯಾನಲ್ ಚರ್ಚೆ (ವಿಷಯ: ‘ಖಾಸಗಿ ಪದವಿ ಪೂರ್ವ ಕಾಲೇಜುಗಳ ನಿರ್ವಹಣೆಯ ಸವಾಲುಗಳು’) ಮತ್ತು 11.00 ರಿಂದ 12.30 ರವರೆಗೆ ಪ್ಯಾನಲ್ ಚರ್ಚೆ (ವಿಷಯ: ‘ರಾಷ್ಟ್ರ ನಿರ್ಮಾಣದಲ್ಲಿ ಖಾಸಗಿ ಪದವಿ ಪೂರ್ವ ಕಾಲೇಜುಗಳ ಪಾತ್ರ’) ಈ ಎಲ್ಲಾ ವಿಷಯಗಳ ಮೇಲೆ ಸಂಪನ್ಮೂಲ ವ್ಯಕ್ತಿಗಳು ವಿಷಯಗಳ ಮಂಡನೆ ಮಾಡಲಿದ್ದು ಅದರೊಂದಿಗೆ ‘ಸಂವಾದ ಮತ್ತು ಮುಕ್ತವಾದ ಚರ್ಚೆ’ ನಡೆಯಲಿದೆ. ಅಂತೆಯೇ ಮೊದಲ ದಿನ ಅಂದರೆ ಜನವರಿ 05 ಶುಕ್ರವಾರ ಸಂಜೆ 7.45 ಕ್ಕೆ ಆಳ್ವಾಸ್ ಕಾಲೇಜು ವಿದ್ಯಾರ್ಥಿಗಳಿಂದ ‘ಸಾಂಸ್ಕೃತಿಕ ವೈಭವ’ಕಾರ್ಯಕ್ರಮವೂ ನಡೆಯಲಿದೆ.
ಈ ಎರಡು ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಕರ್ನಾಟಕ ಅನುದಾನ ರಹಿತ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿಗಳ ಅಧ್ಯಕ್ಷರು/ಸಂಚಾಲಕರು/ಕಾರ್ಯದರ್ಶಿಗಳು/ಸದಸ್ಯರು ಸೇರಿದಂತೆ ಎಲ್ಲರೂ ತಪ್ಪದೇ ಭಾಗವಹಿಸಲು ಹಾಗೂ ಭಾಗವಹಿಸುವ ಪ್ರತಿನಿಧಿಗಳಿಗೆ ಮೂಲಭೂತ ಸೌಕರ್ಯವನ್ನು ಹೊಂದಿರುವ ವಸತಿ ಸೌಲಭ್ಯವನ್ನು ಇಚ್ಛಿಸಿದ್ದಲ್ಲಿ ಉಚಿತವಾಗಿ ನೀಡಲಾಗುವುದುಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ನೋಂದಣಿಗಾಗಿ ಲಿಂಕ್:
https://kupma.org/pre-university-education-open-conclave-2024/
ಅಥವಾ
Website: https://kupma.org/ ಲಾಗಿನ್ ಆಗಬಹುದು.












