ರಾಜ್ಯಮಟ್ಟದ ಜಂಪ್‌ರೋಪ್ : ಕಾರ್ಕಳ ಜ್ಞಾನಸುಧಾ ತಂಡಕ್ಕೆ ಕಂಚಿನ ಪದಕ

ಕೊಪ್ಪಳ: ಶಾಲಾಶಿಕ್ಷಣ ಇಲಾಖೆ (ಪದವಿ ಪೂರ್ವ)ಯ ವತಿಯಿಂದ
ಕೊಪ್ಪಳದಲ್ಲಿ ಜರುಗಿದ ರಾಜ್ಯಮಟ್ಟದ ಜಂಪ್‌ರೋಪ್ ಸ್ಪರ್ಧೆಯ
೩೦ಸೆಕೆಂಡ್ ಡಬಲ್ ಅಂಡರ್ ರಿಲೇ ವಿಭಾಗದಲ್ಲಿ ಕಾರ್ಕಳ ಜ್ಞಾನಸುಧಾ
ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ನಿಖಿಲ್ ಎಂ.ವಿ, ಪೂರ್ವಜ್ ಗೌಡ ವಿ, ಪ್ರಥಮೇಶ್ ಡಿ.ಪಿ, ಎನ್.ನಿಖಿಲ್, ಶಾನ್ವಿ ಎಸ್ ಹಾಗೂ ಕಾಜೊಲ್.ಎಂ.ಪಿ ತೃತೀಯ ಸ್ಥಾನ ಪಡೆದು ಕಂಚಿನ ಪದಕ
ತನ್ನದಾಗಿಸಿಕೊಂಡಿದ್ದಾರೆ.

ಈ ಎಲ್ಲಾ ಸಾಧಕ ವಿದ್ಯಾರ್ಥಿಗಳನ್ನು ಅಜೆಕಾರು ಪದ್ಮಗೋಪಾಲ್
ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಸುಧಾಕರ ಶೆಟ್ಟಿಯವರು ಅಭಿನಂದಿಸಿದ್ದಾರೆ.