ರಾಜ್ಯಮಟ್ಟದ ವಿಪತ್ತು ನಿರ್ವಹಣಾ ಆನ್ ಲೈನ್ ತರಬೇತಿ ಕಾರ್ಯಾಗಾರ

ಉಡುಪಿ: ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಆಂತರಿಕ ಗುಣಮಟ್ಟ ಕಾತರಿ ಘಟಕ, ರೋವರ್ಸ್ ಮತ್ತು ರೇಂಜರ್ಸ್ ಘಟಕ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್, ರಾಜ್ಯ ಸಂಸ್ಥೆ ಕರ್ನಾಟಕ ಇದರ ಸಹಯೋಗದೊಂದಿಗೆ ಮೂರು ದಿನಗಳ ರಾಜ್ಯ ಮಟ್ಟದ ವಿಪತ್ತು ನಿರ್ವಹಣಾ ಆನ್ಲೈನ್ ತರಬೇತಿ ಕಾರ್ಯಾಗಾರವನ್ನು ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಯಿತು.

ಅದಮಾರು ಮಠ ವಿಶ್ವಪ್ರಿಯತೀರ್ಥ ಸ್ವಾಮೀಜಿ ಕಾರ್ಯಾಗಾರವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಕಾಲೇಜಿನ ಪ್ರಾಂಶುಪಾಲ ಡಾ. ರಾಘವೇಂದ್ರ ಎ . ಅಧ್ಯಕ್ಷತೆ ವಹಿಸಿದ್ದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಂಸ್ಥೆಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ, ಕಾಲೇಜಿನ ಉಪಪ್ರಾಂಶುಪಾಲ ಪ್ರಕಾಶ್ ರಾವ್, ರಾಜ್ಯ ಸಂಘಟನಾ ಆಯುಕ್ತ ಪ್ರಭಾಕರ ಭಟ್, ತಾಂತ್ರಿಕ ಸಲಹೆಗಾರರಾದ ಮಧುಸೂದನ ಎ.ಎಸ್., ಕಾರ್ಯಾಗಾರದ ಸಂಯೋಜಕಿ ಹಾಗೂ ಕಾಲೇಜಿನ ರೇಂಜರ್ ನಾಯಕಿ ಜ್ಯೋತಿ ಆಚಾರ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸಂಪನ್ಮೂಲ ವ್ಯಕ್ತಿ ಪ್ರಭಾತ್ ಕಲ್ಕೂರ ಕಾರ್ಯಾಗಾರದ ಬಗ್ಗೆ ಮಾಹಿತಿ‌ ನೀಡಿದರು. ಕಾರ್ಯಾಗಾರದಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲಗಳಿಂದ ಒಟ್ಟು 300 ಅಧಿಕ ರೋವರ್ಸ್, ರೇಂಜರ್ಸ್ ಹಾಗೂ ಘಟಕದ ಸಂಯೋಜಕರು ಪಾಲ್ಗೊಂಡಿದ್ದರು. ರೋವರ್ ಸ್ಕೌಟ್ಸ್ ಲೀಡರ್ ಸಂತೋಷ್ ವಂದಿಸಿದರು.

ಈ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಉಡುಪಿ ಜಿಲ್ಲಾ ಸ್ಕೌಟ್ಸ್ ಆಯುಕ್ತ ಡಾ. ವಿಜಯೇಂದ್ರ ವಸಂತ್ ಸಮಾರೋಪ ಭಾಷಣ ಮಾಡಿದರು. ಕಾಲೇಜಿನ ಉಪಪ್ರಾಂಶುಪಾಲ ಡಾ. ಪ್ರಕಾಶ್ ರಾವ್ ಅಧ್ಯಕ್ಷತೆ ವಹಿಸಿದ್ದರು.

ಸಮಾರೋಪ ಕಾರ್ಯಕ್ರಮವನ್ನು ರೇಂಜರ್ ನಾಯಕಿ ಜ್ಯೋತಿ ಆಚಾರ್ಯ ಮತ್ತು ಸಹ ನಾಯಕಿ ಪ್ರತಿಭಾ ಎಸ್. ಭಟ್ ನಿರೂಪಿಸಿದರು.