ರಾಜ್ಯ ಮಟ್ಟದ ಸಾಧಕಿ ಸ್ಪಂದನಾ ಆರ್‌ ಶೆಟ್ಟಿಗೆ 50,000 ರೂ.ಬಹುಮಾನ ವಿತರಣೆ

ಕುಂದಾಪುರ: SSLCಯಲ್ಲಿ 84% ಅಂಕ ಗಳಿಸಿದ್ದರೂ ಕೂಡ ಸಂಸ್ಥೆಯ ಬೋಧಕ ಸಿಬ್ಬಂದಿಗಳ ನಿರಂತರ ಪ್ರಯತ್ನ ಮತ್ತು ವಿದ್ಯಾರ್ಥಿನಿಯ ಕಠಿಣ ಪರಿಶ್ರಮದ ಫಲವಾಗಿ ಸ್ಪಂದನಾ 98.7% ಪಡೆದು ರಾಜ್ಯಕ್ಕೆ 9ನೇ Rank ಪಡೆದಿರುವುದು ಎಲ್ಲಾ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾಗಿರುವುದು.

ಕುಂದಾಪುರದ ಸುಜ್ಞಾನ ಶಿಕ್ಷಣ ಸಂಸ್ಥೆಯ ಪ್ರಥಮ ಬ್ಯಾಚ್‌ ನಲ್ಲಿ ಯಾವುದೇ ವಿದ್ಯಾರ್ಥಿ ರಾಜ್ಯಮಟ್ಟದ Rank ಪಡೆದರೆ 50,000 ಬಹುಮಾನ ನೀಡುವುದಾಗಿ ಹಿಂದೆ ತಿಳಿಸಲಾಗಿತ್ತು.

ಅದರಂತೆ ಇಂದು ಸ್ಪಂದನಾಗೆ 50,000 ರೂ. ನಗದು ನೀಡಿ ಗೌರವಿಸಲಾಯಿತು. ಅವಳ ಸಾಧನೆ ನಮ್ಮ ಮುಂದಿನ ವಿದ್ಯಾರ್ಥಿಗಳಿಗೆ ದಾರಿ ದೀಪವಾಗಲಿ ಮತ್ತು ಅವಳ ಭವಿಷ್ಯ ಉಜ್ವಲವಾಗಲಿ ಎಂಬ ಹಾರೈಕೆ.