Homeರಾಜ್ಯ ಸುದ್ದಿಅಮರನಾಥ ಯಾತ್ರೆಯಲ್ಲಿ ಸಿಲುಕಿದ ಕನ್ನಡಿಗರಿಗಾಗಿ ಸಹಾಯವಾಣಿ ಪ್ರಾರಂಭಿಸಿದ ರಾಜ್ಯ ಸರ್ಕಾರ

ಅಮರನಾಥ ಯಾತ್ರೆಯಲ್ಲಿ ಸಿಲುಕಿದ ಕನ್ನಡಿಗರಿಗಾಗಿ ಸಹಾಯವಾಣಿ ಪ್ರಾರಂಭಿಸಿದ ರಾಜ್ಯ ಸರ್ಕಾರ

ಬೆಂಗಳೂರು: ದಕ್ಷಿಣ ಕಾಶ್ಮೀರದ ಪ್ರಖ್ಯಾತ ಅಮರನಾಥ ಗುಹೆಯ ಬಳಿ ಶುಕ್ರವಾರ ಸಂಜೆ ಸಂಭವಿಸಿದ ಭಾರೀ ಮಳೆಯಿಂದ ಕೃತಕ ನೆರೆ ಉಂಟಾಗಿ ಇದುವರೆಗೆ 16 ಮಂದಿ ಸಾವಿಗೀಡಾಗಿದ್ದು, 60ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಗಂಭೀರವಾಗಿರುವ ರಾಜ್ಯ ಸರ್ಕಾರ ಅಮರನಾಥ ಯಾತ್ರೆಯಲ್ಲಿ ಅತಂತ್ರ ಸ್ಥಿತಿಯಲ್ಲಿ ಸಿಲುಕಿರುವ ಕನ್ನಡಿಗರ ನೆರವಿಗಾಗಿ ಸಹಾಯವಾಣಿಯನ್ನು ಆರಂಭಿಸಿದೆ. ಅಮರನಾಥ ಗುಹೆಯ ಬಳಿ ಕರ್ನಾಟಕದ ಯಾವುದೇ ವ್ಯಕ್ತಿಯು ಸಿಕ್ಕಿಬಿದ್ದಲ್ಲಿ 080-1070, 22340676 ಕರೆ ಮಾಡುವ ಮೂಲಕ ಅಥವಾ incomedmkar@gmail.com ಗೆ ಇಮೇಲ್ ಮಾಡಿ ಸಂಪರ್ಕಿಸಿದಲ್ಲಿ ಸರ್ಕಾರ ಅಗತ್ಯ ಸಹಾಯ ಮಾಡಲಿದೆ.

ಸಹಾಯವಾಣಿ ಸಂಖ್ಯೆ:

ಎನ್‌ಡಿಆರ್‌ಎಫ್‌: 011-23438252, 011-23438253

ಕಾಶ್ಮೀರ ವಿಭಾಗೀಯ ಸಹಾಯವಾಣಿ: 0194-2496240

ದೇವಳ ಮಂಡಳಿಯ ಸಹಾಯವಾಣಿ : 0194-2313149

 

error: Content is protected !!