ಕುಂದಾಪುರ: ಶಿಸ್ತುಬದ್ಧ ಶಿಕ್ಷಣ, ಮೌಲ್ಯಾಧಾರಿತ ಕಲಿಕೆ ಮತ್ತು ಶ್ರೇಷ್ಠ ಫಲಿತಾಂಶಗಳಿಗಾಗಿ ಪ್ರಸಿದ್ಧಿಯಾದ ಸೈಂಟ್ ಮೇರಿಸ್ ಪದವಿ ಪೂರ್ವ ಕಾಲೇಜಿನಲ್ಲಿ 2026-27ನೇ ಸಾಲಿನ ದಾಖಲಾತಿ ಪ್ರಕ್ರಿಯೆ ಆರಂಭಗೊಂಡಿದೆ. ವಿದ್ಯಾಭಿಮಾನಿಗಳಿಂದ ಈ ಸಂಸ್ಥೆಗೆ ಪ್ರತಿವರ್ಷವೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಕಥೋಲಿಕ್ ವಿದ್ಯಾ ಮಂಡಳಿಯ ಆಶ್ರಯದಲ್ಲಿ ಸುಮಾರು 135 ವರ್ಷಗಳ ಹಿಂದೆ ಸ್ಥಾಪಿತವಾದ ಸೈಂಟ್ ಮೇರಿಸ್ ವಿದ್ಯಾ ಸಂಸ್ಥೆಗಳು, ಕುಂದಾಪುರದಲ್ಲಿ ಶಿಕ್ಷಣದ ಬೆಳಕನ್ನು ಹರಡುತ್ತಿವೆ. ಹಿರಿಯ ಪ್ರಾಥಮಿಕ ಶಾಲೆಯಿಂದ ಆರಂಭಗೊಂಡ ಈ ಸಂಸ್ಥೆ, ಹಂತ ಹಂತವಾಗಿ ಪ್ರೌಢಶಾಲೆ, ಆಂಗ್ಲ ಮಾಧ್ಯಮ, ಕಿಂಡರ್ಗಾರ್ಟನ್ ಹಾಗೂ 2002ರಲ್ಲಿ ಪದವಿ ಪೂರ್ವ ಕಾಲೇಜು ಸ್ಥಾಪನೆಯ ಮೂಲಕ ಸಮಗ್ರ ಶಿಕ್ಷಣ ಕೇಂದ್ರವಾಗಿ ಬೆಳೆದಿದೆ.
ಶಿಕ್ಷಣದ ವೈಶಿಷ್ಟ್ಯತೆ
ಸೈಂಟ್ ಮೇರಿಸ್ ಪಿಯು ಕಾಲೇಜು ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ವಿಶೇಷವಾಗಿ CET, NEET, JEE, CA/CS ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಭವಿ ಉಪನ್ಯಾಸಕರಿಂದ ತರಬೇತಿ ನೀಡಲಾಗುತ್ತದೆ.
ಮೌಲ್ಯಾಧಾರಿತ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡುವುದು ಸಂಸ್ಥೆಯ ವಿಶೇಷತೆ.
ವಿದ್ಯಾರ್ಥಿ ಸೌಲಭ್ಯಗಳು
- ಮೆರಿಟ್ ಪಡೆದ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ
- ಆರ್ಥಿಕವಾಗಿ ಹಿಂದುಳಿದವರಿಗೆ ಶುಲ್ಕ ರಿಯಾಯಿತಿ
- ಕಂತುಗಳಲ್ಲಿ ಶುಲ್ಕ ಪಾವತಿ ವ್ಯವಸ್ಥೆ
- ವಿದ್ಯಾರ್ಥಿವೇತನಗಳಿಗೆ ಮಾರ್ಗದರ್ಶನ
- ವೈಯಕ್ತಿಕ ಗಮನ ಹಾಗೂ ಪೋಷಕರ ಸಭೆಗಳು
ಶೈಕ್ಷಣಿಕ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಾಧನೆ
ಕಳೆದ 24 ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳು ಈ ಸಂಸ್ಥೆಯಿಂದ ಪಿಯು ಶಿಕ್ಷಣ ಪಡೆದು ದೇಶ-ವಿದೇಶಗಳಲ್ಲಿ ಶ್ರೇಷ್ಠ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿ ವರ್ಷವೂ ಅತ್ಯುತ್ತಮ ಫಲಿತಾಂಶಗಳ ಮೂಲಕ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದೆ. ಪಠ್ಯದ ಜೊತೆಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೂ ಸಮಾನ ಪ್ರಾಮುಖ್ಯತೆ ನೀಡಲಾಗುತ್ತದೆ. ವಿದ್ಯಾರ್ಥಿಗಳು ತಾಲೂಕು, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಸಾಧನೆ ಮಾಡಿ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಸರ್ವಾಂಗೀಣ ಬೆಳವಣಿಗೆಗೆ ಒತ್ತು
ವೃತ್ತಿ ಮಾರ್ಗದರ್ಶನ ಶಿಬಿರಗಳು, ಕೈಗಾರಿಕಾ ಭೇಟಿ, ಶೈಕ್ಷಣಿಕ ಪ್ರವಾಸಗಳು, ಅಂತರಾಷ್ಟ್ರೀಯ ತಜ್ಞರೊಂದಿಗೆ ಸಂವಾದ ಮುಂತಾದ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಉತ್ತೇಜನ ನೀಡಲಾಗುತ್ತದೆ. “ಶಿಕ್ಷಣ ಬದುಕಿಗೆ ಬೆಳಕನ್ನು ನೀಡುತ್ತದೆ” ಎಂಬ ಮೌಲ್ಯವನ್ನು ಜೀವಂತವಾಗಿಟ್ಟುಕೊಂಡು, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಈ ವಿದ್ಯಾ ದೇಗುಲ ಮುಂಚೂಣಿಯಲ್ಲಿದೆ.
ಯಾವುದೇ ಹೆಚ್ಚಿನ ಮಾಹಿತಿ ಹಾಗೂ ಪ್ರವೇಶಾತಿಗಾಗಿ ಸಂಪರ್ಕಿಸಿ
ಸೈಂಟ್ ಮೇರಿಸ್ ಸಂಯುಕ್ತ ಪದವಿ ಪೂರ್ವ ಕಾಲೇಜು
ಚರ್ಚ್ ರಸ್ತೆ, ಕುಂದಾಪುರ – 576201
6362676193 / 8217879605


















