ಏ‌.29 ರಿಂದ ಚಂದನವಾಹಿನಿಯಲ್ಲಿ ಎಸ್.ಎಸ್.ಎಲ್.ಸಿ ಪುನರ್ಮನನ ತರಗತಿ: ಸುರೇಶ್ ಕುಮಾರ್

ಬೆಂಗಳೂರು: ದೇಶದಲ್ಲಿ ಕೊರೋನಾ ವೈರಸ್ ನಿಂದ ಲಾಕ್‌ಡೌನ್ ಜಾರಿಯಾಲ್ಲಿದ್ದು, ಈ ಹಿನ್ನೆಲೆಯಲ್ಲಿ ಎಸ್ಎಸ್‌ಎಲ್‌ಸಿ ಪರೀಕ್ಷೆಗಳು ಮುಂದೂಡಿಕೆ ಆಗಿರುವುದರಿಂದ ಪರೀಕ್ಷೆ ಬರೆಯಲು ಕಾಯುತ್ತಿರುವ ವಿದ್ಯಾರ್ಥಿಗಳು ದೂರದರ್ಶನದ ಚಂದನ ವಾಹಿನಿಯಲ್ಲಿ ಏ. 29ರಿಂದ ಪುನರ್ಮನನ ತರಗತಿಗಳನ್ನು ಆರಂಭಿಸಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.
ನುರಿತ ಶಿಕ್ಷಕರಿಂದ ಬೋಧನೆ:
ವಿದ್ಯಾರ್ಥಿಗಳಿಗೆ ಈ ತರಗತಿಗಳು ಏ.29ರಿಂದ ಪ್ರತಿ ದಿನ ಮಧ್ಯಾಹ್ನ 3ರಿಂದ 4.30ರವರೆಗೆ ಜರಗಲಿದ್ದು, ನುರಿತ ಶಿಕ್ಷಕರಿಂದ ಬೋಧನೆ ನಡೆಯಲಿದೆ.
ಮೊದಲ 16 ದಿನ ಪ್ರತಿ 45 ನಿಮಿಷಯಗಳ ಎರಡು ಅವಧಿಗಳಲ್ಲಿ  ಹಾಗೂ ವಿಜ್ಞಾನ ವಿಷಯಗಳ ಬೋಧನಾ ತರಗತಿಗಳು ನಡೆಯಲಿದೆ.
ಹಾಗೂ 17ನೇ ದಿನ ಈ ಎರಡೂ ವಿಷಯಗಳ ಮಾದರಿ ಪ್ರಶ್ನೆ ಪತ್ರಿಕೆಗಳಿಗೆ ಉತ್ತರಿಸುವ ವಿಧಾನವನ್ನು ಶಿಕ್ಷಕರು ಹೇಳಿಕೊಡವರು. 18ನೇ ದಿನದಿಂದ ಸಮಾಜ ವಿಜ್ಞಾನದ ತರಗತಿಗಳು 6 ದಿನಗಳ ಅವಧಿಗೆ ನಡೆಯಲಿದ್ದು, ನಂತರದ ದಿನಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷಾ ತರಗತಿಗಳ ಬೋಧನೆಯನ್ನೂ ಸಹ ಮಾಡಲಾಗುತ್ತದೆ. ಹಾಗೂ ವಿಷಯದ ಕೊನೆಯಲ್ಲಿ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಉತ್ತರಿಸುವ ವಿಧಾನವನ್ನು ತಿಳಿಸಲಾಗುತ್ತದೆ ಎಂದೂ ಹೇಳಿದರು.