ಎಸ್.ಎಸ್.ಎಲ್.ಸಿ. ಪರೀಕ್ಷೆ: ಹೈಕೋರ್ಟ್ ನಿಂದ ಮಹತ್ವದ ತೀರ್ಪು- ಸದ್ಯದಲ್ಲೇ ಹೊರಬೀಳಲಿದೆಯೇ ಫಲಿತಾಂಶ?

ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಡೆಸುವ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆಗಳಿಗೆ ಗ್ರೇಡ್ ಬದಲಿಗೆ ಅಂಕ ನೀಡಲು ನಿರ್ದೇಶಿಸಿ ಹೊರಡಿಸಿರುವ ಆದೇಶ ಮರು ಪರಿಶೀಲಿಸುವಂತೆ ಕೋರಿ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ​ಹೈಕೋರ್ಟ್ ವಿಚಾರಣೆ ನಡೆಸಿ,​ ಇತ್ಯರ್ಥ ಪಡಿಸಿದೆ. 

ಸಹನಾ ಆರ್​ ನಾಯ್ಕ್​ ಎನ್ನುವ ಚಿಕ್ಕಮಗಳೂರಿನ ಯುವತಿ, ಕೇಂದ್ರದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಂಕ ಮುಖ್ಯ ಗ್ರೇಡ್ ಕೊಟ್ಟರೆ ಭವಿಷ್ಯ ಸಮಸ್ಯೆ. ಗ್ರೇಡ್​ ಬದಲು ಅಂಕ ಕೊಡುವಂತೆ ನಿರ್ದೇಶನ ಕೊಡುವಂತೆ ಕೋರ್ಟ್​ಗೆ ರಿಟ್​ ಅರ್ಜಿ ಸಲ್ಲಿಸಿದ್ದರು.

ಗ್ರೇಡ್ ಬದಲು ಅಂಕ ಕೊಡುವಂತೆ ಹೈಕೋರ್ಟ್ ತೀರ್ಪು

 ನ್ಯಾ.ಇ.ಎಸ್.ಇಂದಿರೇಶ್ ಅವರಿದ್ದ ಪೀಠವು ಪ್ರಸ್ತಕ ಸಾಲಿಗೆ SSLC ಪರೀಕ್ಷೆಗೆ ಮತ್ತೆ ಅಂಕ ಪದ್ಧತಿ ಅನುಸರಿಸಿ ಎಂದು ನಿರ್ದೇಶಿಸಿದೆ. “ಎಲ್ಲರನ್ನೂ ಪಾಸು ಮಾಡುವ ನಿಮ್ಮ ಉದ್ದೇಶ ಸರಿ ಇರಬಹುದು. ಅದು ಕೇಳಲು ಚೆನ್ನಾಗಿದೆ. ಒಳ್ಳೆಯ ಶಿಕ್ಷಕರನ್ನು ನೇಮಿಸಿ. ಮಕ್ಕಳು ಕನ್ನಡ, ಹಿಂದಿ.. ಯಾವ ಭಾಷೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅದನ್ನು ಕಲಿಯಲಿ ಬಿಡಿ. ವಿದ್ಯಾರ್ಥಿಗಳಿಗೆ ಬೇಸಿಕ್‌ ವಿಚಾರವೇ ಗೊತ್ತಿಲ್ಲ ಎಂದು ಹೈಕೋರ್ಟ್​ ಪೀಠ ಹೇಳಿತು.” ಪರೀಕ್ಷಾ ಪ್ರಕ್ರಿಯೆ ಮುಗಿದ ನಂತರ ನಿಯಮ ಬದಲಿಸುವುದು ಕಾನೂನುಬದ್ಧವಲ್ಲ ಎಂದು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್​ ಇತ್ಯರ್ಥ ಪಡಿಸ ಅಂಕ ಪದ್ಧತಿಯನ್ನೇ ಮುಂದುವರಿಸಲು ಆದೇಶಿಸಿದೆ.

ಸದ್ಯದಲ್ಲಿ ಹೊರಬೀಳಲಿದೆಯೇ ಫಲಿತಾಂಶ

ಈಗಾಗಲೇ ಎಸ್‌ಎಸ್‌ಎಲ್ ಮೌಲ್ಯಮಾಪನ ಬಹುತೇಕ ಪೂರ್ಣಗೊಂಡಿದೆ. ಹಿಂದಿ ಸೇರಿದಂತೆ ತೃತೀಯ ಭಾಷೆ ಬರೆದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಯನ್ನು ಕೂಡಾ ಮೌಲ್ಯಮಾಪಕರು ಅಂಕಗಳನ್ನೇ ನಮೂದಿಸಿದ್ದಾರೆ. ಇದೀಗ ತೀರ್ಪಿನ ಆಧಾರದಲ್ಲಿ ಕೆಎಸ್‌ಇಎಬಿ ಫಲಿತಾಂಶ ಪ್ರಕಟಿಸಬೇಕಿದೆ. ಆದಷ್ಟು ಶೀಘ್ರದಲ್ಲಿ ಫಲಿತಾಂಶ ಬರುವ ನಿರೀಕ್ಷೆಯಿದೆ.