ಎಸ್.ಎಸ್.ಎಲ್.ಸಿ ಪರೀಕ್ಷೆ: 172 ಮಂದಿ ಗೈರು

ಉಡುಪಿ: ಜಿಲ್ಲೆಯಲ್ಲಿ ಗುರುವಾರ ನಡೆದ ಎಸ್‍ಎಸ್‍ಎಲ್‍ಸಿ ತೃತೀಯ ಭಾಷೆ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಒಟ್ಟು 13314 ಮಂದಿ ಪರೀಕ್ಷೆ ಬರೆದಿದ್ದಾರೆ.  ಜಿಲ್ಲೆಯಲ್ಲಿ ಪರೀಕ್ಷೆಗೆ ಒಟ್ಟು 13486 ಮಂದಿ ನೊಂದಾಯಿಸಿದ್ದು, ಇದರಲ್ಲಿ 172 ಮಂದಿ ಗೈರು ಹಾಜರಾಗಿದ್ದಾರೆ.

ಪರೀಕ್ಷೆಗೆ ನೊಂದಾಯಿಸಿದ ರೆಗ್ಯುಲರ್ ಮತ್ತು ರೆಗ್ಯುಲರ್ ಪುನರಾವರ್ತಿತ 12956 ಮಂದಿ ವಿದ್ಯಾರ್ಥಿಗಳಲ್ಲಿ 123 ಮಂದಿ ಗೈರು ಹಾಜರಾಗಿದ್ದು, 12833 ಮಂದಿ ಪರೀಕ್ಷೆಗೆ ಹಾಜರಾಗಿದ್ದಾರೆ. 423 ಮಂದಿ ಖಾಸಗಿಯಾಗಿ ಪರೀಕ್ಷೆಗೆ ನೊಂದಾಯಿಸಿದ್ದ ಅಭ್ಯರ್ಥಿಗಳಲ್ಲಿ 49 ಮಂದಿ ಗೈರು ಹಾಜರಾಗಿದ್ದು, 374 ಮಂದಿ ಪರೀಕ್ಷೆ ಬರೆದಿದ್ದಾರೆ. ಮಾಹಿತಿ ತಂತ್ರಜ್ಞಾನದಲ್ಲಿ ಒಟ್ಟು 61, ಆಟೋ ಮೊಬೈಲ್‍ನಲ್ಲಿ ಒಟ್ಟು 41 ಮಂದಿ, ಬ್ಯೂಟಿಯಲ್ಲಿ ಒಟ್ಟು 5 ಮಂದಿ ಪರೀಕ್ಷೆ ಬರೆದಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣಾ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.