ಉಡುಪಿ: ಕಂಬಳ ಗದ್ದೆಯಲ್ಲಿ ಮತ್ತೊಬ್ಬ ಹುಸೇನ್ ಬೋಲ್ಟ್ ಉದಯವಾಗಿದ್ದು, ವೇಣೂರಿನಲ್ಲಿ ನಡೆದ ಸೂರ್ಯ ಚಂದ್ರ ಕಂಬಳದಲ್ಲಿ ಕಾರ್ಕಳ ತಾಲ್ಲೂಕಿನ ಬಜೆಗೋಳಿಯ ನಿವಾಸಿ ನಿಶಾಂತ್ ಶೆಟ್ಟಿ ಹೊಸ ದಾಖಲೆ ನಿರ್ಮಿಸಿದ್ದಾರೆ.
ಶ್ರೀನಿವಾಸ್ ಗೌಡ ಈಚೆಗೆ ಮೂಡುಬಿದಿರೆ ಮಿಜಾರಿನಲ್ಲಿ ನಡೆದ ಕಂಬಳದಲ್ಲಿ ಹೊಸ ದಾಖಲೆ ನಿರ್ಮಿಸಿದ್ದರು. ಆದರೆ ಇದೀಗ ಆ ದಾಖಲೆಯನ್ನು ನಿಶಾಂತ್ ಉಡೀಸ್ ಮಾಡಿದ್ದಾರೆ.
ವೇಣೂರಿನಲ್ಲಿ ನಡೆದ ಕಂಬಳದಲ್ಲಿ ಶ್ರೀನಿವಾಸ ಗೌಡ 13.62 ಸೆಕೆಂಡ್ ನಲ್ಲಿ 142.5 ಮೀಟರ್ ಕ್ರಮಿಸಿದ್ದರು. ನಿಶಾಂತ್ 13.61 ಸೆಕೆಂಡ್ ನಲ್ಲಿ 143 ಮೀಟರ್ ಕ್ರಮಿಸಿ ಹೊಸ ದಾಖಲೆ ನಿರ್ಮಿಸಿದ್ದಲ್ಲದೆ, ಶ್ರೀನಿವಾಸ್ ಗೌಡ ಅವರ ದಾಖಲೆಯನ್ನು ಮುರಿದ್ದಾರೆ.
ಶ್ರೀನಿವಾಸ್ ಗೌಡ್ ಅವರ ಸಾಧನೆ ವಿಶ್ವಮಟ್ಟದಲ್ಲಿ ಸದ್ದು ಮಾಡಿತ್ತು. ಇದೀಗ ನಿಶಾಂತ್ ಶೆಟ್ಟಿ ಆ ದಾಖಲೆಯನ್ನು ಮುರಿದು, ಕಂಬಳ ಗದ್ದೆಯ ಓಟದಲ್ಲಿ ಮೊದಲ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ಕಂಬಳ ಗದ್ದೆಯ ಬೋಲ್ಟ್ ಎಂಬ ನಾಮಖ್ಯಾತಿಯನ್ನು ಪಡೆದುಕೊಂಡಿದ್ದಾರೆ.
ಈ ಪ್ರಸಕ್ತ ಸಾಲಿನಲ್ಲಿ ಇನ್ನೂ ಮೂರ್ನಾಲ್ಕು ಕಂಬಳ ಕೂಟ ನಡೆಯಲಿದ್ದು, ಇನ್ನೇಷ್ಟು ದಾಖಲೆ ನಿರ್ಮಾಣ ಆಗಲಿದೆ ಎಂಬುವುದನ್ನು ಕಂಬಳ ಪ್ರಿಯರು ಕಾತುರದಿಂದ ನಿರೀಕ್ಷಿಸುತ್ತಿದ್ದಾರೆ.
ಚಿತ್ರ: ನಿತೇಶ್ ಕೋಟ್ಯಾನ್