ಶ್ರೀನಗರ: ಬಿಗಿ ಭದ್ರತೆಯ ನಡುವೆ ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಇಂದಿನಿಂದ ಜಿ-20 ದೇಶಗಳ ಮೂರನೇ ಪ್ರವಾಸೋದ್ಯಮ ಕಾರ್ಯ ಗುಂಪು ಸಭೆಯನ್ನು ಆಯೋಜಿಸಲಿದೆ. ಕೇಂದ್ರವು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಂಡ ನಂತರ ಮತ್ತು ಆಗಸ್ಟ್ 2019 ರಲ್ಲಿ ರಾಜ್ಯತ್ವವನ್ನು ತೆಗೆದುಹಾಕಿದ ನಂತರ ಈ ಪ್ರದೇಶದಲ್ಲಿ ನಡೆಯುವ ಮೊದಲ ಅಂತರರಾಷ್ಟ್ರೀಯ ಕಾರ್ಯಕ್ರಮ ಇದಾಗಿದೆ.
ಶ್ರೀನಗರ ನಗರದ ಕೆಲವು ಭಾಗಗಳು ಮತ್ತು ಜಿ- 20 ನಡೆಯಲಿರುವ ಶೇರ್-ಎ-ಕಾಶ್ಮೀರ್ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ಗೆ ಹೋಗುವ ರಸ್ತೆಗಳನ್ನು ಅತ್ಯಾಧಿನಿಕವಾಗಿ ಸಿಂಗಾರಗೊಳಿಸಲಾಗಿದೆ. ಒಂದು ಕಾಲದಲ್ಲಿ ಭಯೋತ್ಪಾದನೆಯ ಕರಾಳ ಬಾಹುಗಳಲ್ಲಿ ನಲುಗುತ್ತಿದ್ದ ರಾಜ್ಯ ಇದೇನಾ ಎಂದು ಅಚ್ಚರಿಪಡುವಷ್ಟು ಇಲ್ಲಿನ ಸ್ಥಿತಿಗತಿಗಳು ಬದಲಾಗಿವೆ ಎಂದು ಇಲ್ಲಿನ ಸ್ಥಳೀಯರು ಹೇಳುತ್ತಾರೆ.
ಜಿ20 ಮುಖ್ಯ ಸಂಯೋಜಕ ಹರ್ಷ್ ವರ್ಧನ್ ಶೃಂಗ್ಲಾ ಮಾತನಾಡಿ, ಭಾರತವು ತನ್ನ ಜಿ20 ಅಧ್ಯಕ್ಷ ಸ್ಥಾನದ ಅರ್ಧದಾರಿಯಲ್ಲೇ ಇದ್ದು, ಇದುವರೆಗೆ ದೇಶಾದ್ಯಂತ 118 ಸಭೆಗಳನ್ನು ನಡೆಸಲಾಗಿದೆ. ಪ್ರವಾಸೋದ್ಯಮದ ಹಿಂದಿನ ಎರಡು ಸಭೆಗಳಿಗೆ ಹೋಲಿಸಿದರೆ ಶ್ರೀನಗರ ಸಭೆಯು ಅತಿ ಹೆಚ್ಚು ಭಾಗವಹಿಸುವಿಕೆ ಹೊಂದಿದೆ ಎಂದು ಅವರು ಹೇಳಿದರು.
Model G20 Summit hosted by the Department of Tourism, Kashmir at SKICC, Srinagar!
Over 60 participants from universities across J&K came together to discuss Tourism Priority Areas, Sustainable Tourism Practices and Gender Equity & Women in Tourism. #ModelG20Summit @SyedAbidShah pic.twitter.com/hhNbwk5ezm— Jammu & Kashmir Tourism (@JandKTourism) April 29, 2023
ಜಿ20 ಸದಸ್ಯ ರಾಷ್ಟ್ರಗಳಿಂದ ಸುಮಾರು 60 ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಶ್ರೀನಗರ ಕಾರ್ಯಕ್ರಮಕ್ಕೆ ಅತಿ ಹೆಚ್ಚು ಪ್ರತಿನಿಧಿಗಳು ಸಿಂಗಾಪುರದಿಂದ ಬರುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಶೇಷ ಆಹ್ವಾನಿತ ಅತಿಥಿ ದೇಶಗಳ ಪ್ರತಿನಿಧಿಗಳೂ ಇರಲಿದ್ದಾರೆ.
A city is more than a place in space! #G20Kashmir #Srinagar pic.twitter.com/SuUPvYPJ3v
— Aijaz Asad (@AsadamAijaz) May 21, 2023
ಕಾಶ್ಮೀರದಲ್ಲಿ ಜಿ 20 ಸಭೆ ನಡೆಸುವುದನ್ನು ಚೀನಾ ವಿರೋಧಿಸಿದ್ದರೆ, ಸೌದಿ ಅರೇಬಿಯಾ ಕಾರ್ಯಕ್ರಮಕ್ಕೆ ನೋಂದಾಯಿಸಿಕೊಂಡಿಲ್ಲ. ಟರ್ಕಿ, ಶ್ರೀನಗರ ಸಭೆಯಿಂದ ದೂರ ಉಳಿಯಲು ನಿರ್ಧರಿಸಿದೆ.












