ಶ್ರೀ ಕೃಷ್ಣ ಮಠದಲ್ಲಿ ಕೃಷ್ಣ ದೇವರಿಗೆ 1108 ಸೀಯಾಳ-ಪಂಚಾಮೃತ ಅಭಿಷೇಕ

ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ವಾರ್ಷಿಕ ಮಹಾಭಿಷೇಕದ ಪ್ರಯುಕ್ತ ಕೃಷ್ಣ ದೇವರಿಗೆ 1108 ಸೀಯಾಳ ಅಭಿಷೇಕ ಹಾಗೂ ವಿಶೇಷ ಪಂಚಾಮೃತ ಅಭಿಷೇಕವನ್ನು

ಪರ್ಯಾಯ  ಮಠಾಧೀಶರಾದ ಶ್ರೀ  ಈಶಪ್ರಿಯ ತೀರ್ಥ ಶ್ರೀಪಾದರು,  ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು, ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು, ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಪಲಿಮಾರು  ಕಿರಿಯ ಮಠಾಧೀಶರಾದ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು ನೆರವೇರಿಸಿದರು.