ಉಡುಪಿ: ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ, ಜನವರಿ 18 ರಂದು ನಡೆಯಲಿರುವ ಶ್ರೀ ಅದಮಾರು ಮಠದ ಪರ್ಯಾಯ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಹಾಗೂ ಪಲಿಮಾರು ಕಿರಿಯ ಮಠಾಧೀಶರಾದ ಶ್ರೀ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಬಿಡುಗಡೆ ಗೊಳಿಸಿದರು.
ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಸೇವಾ ಬಳಗದ ಗೌರವಾಧ್ಯಕ್ಷರಾದ ಕೆ ರಘುಪತಿ ಭಟ್, ಯು.ಕೆ.ರಾಘವೇಂದ್ರ ರಾವ್, ಮಠದ ದಿವಾನರಾದ ಲಕ್ಷ್ಮೀನಾರಾಯಣ ಮುಚ್ಚಿಂತ್ತಾಯ,ಸೇವಾ ಬಳಗದ ದಿನೇಶ್ ಪುತ್ರನ್,ಸಂತೋಷ್ ಕುಮಾರ್ ಉದ್ಯಾವರ,ವೈ.ಎನ್.ರಾಮಚಂದ್ರ ರಾವ್, ವೈ.ಎನ್.ರಾಮಚಂದ್ರ ರಾವ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.