ಮುಂಡ್ಕಿನಜೆಡ್ಡು ಶ್ರೀ ಗೋಪಾಲಕೃಷ್ಣ ಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ; ವಿವಿಧ ಸ್ಪರ್ಧೆಗಳ ಆಯೋಜನೆ

ಉಡುಪಿ: ಮುಂಡ್ಕಿನಜೆಡ್ಡು ಶ್ರೀ ಗೋಪಾಲಕೃಷ್ಣ ಮಂದಿರದಲ್ಲಿ ಆಗಸ್ಟ್ 19 ಶುಕ್ರವಾರದಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ರಾತ್ರಿ 8 ಗಂಟೆಗೆ ಶ್ರೀ ಕೃಷ್ಣನಿಗೆ ವಿಶೇಷ ಪೂಜೆ ಜರುಗಲಿದೆ.

ಆಗಸ್ಟ್ 20 ಶನಿವಾರ ಸಂಜೆ ಗಂಟೆ 3 ರಿಂದ ಮೊಸರು ಕುಡಿಕೆ ಹಬ್ಬದ ಪ್ರಯುಕ್ತ ಮುದ್ದುಕೃಷ್ಣ ರಸಪ್ರಶ್ನೆ ಸ್ಪರ್ಧೆ (ಕಿರಿಯ ಮತ್ತು ಹಿರಿಯ ವಿಭಾಗ), ಸಂಗೀತ ಕುರ್ಚಿ ಸ್ಪರ್ಧೆ(ಕಿರಿಯ, ಹಿರಿಯ, ಮಹಿಳೆ ಮತ್ತು ಪುರುಷರ ವಿಭಾಗ), ಪುಲ್ ಅಪ್ ಸ್ಪರ್ಧೆ, ಇಡ್ಲಿ ತಿನ್ನುವ ಸ್ಪರ್ಧೆ (ಕಿರಿಯ ಹಿರಿಯ ಮತ್ತು ಪುರುಷರ ವಿಭಾಗ)
, ಮೊಸರು ಕುಡಿಕೆ ಒಡೆಯುವ ಸ್ಪರ್ಧೆ (ಕಿರಿಯ ಮತ್ತು ಹಿರಿಯ ವಿಭಾಗ), ಪ್ರತಿಭಾ ಪುರಸ್ಕಾರ
, ಬಹುಮಾನ ವಿತರಣೆ ಹಾಗೂ ಇತರ ಆಕರ್ಷಕ ಸ್ಪರ್ಧೆಗಳು ಜರುಗಲಿವೆ.

ಸಾರ್ವಜನಿಕರು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಆಡಳಿತ ಮಂಡಳಿಯು ಆತ್ಮೀಯವಾಗಿ ಆಮಂತ್ರಿದೆ.