ಮಣಿಪಾಲ: ಮಣಿಪಾಲ ಶ್ರೀ ಶಾರದ ಟೀಚರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಮಾಂಟೆಸ್ಸರಿ/ನರ್ಸರಿ ಟೀಚರ್ ಟ್ರೈನಿಂಗ್ (ಆ.ಒಇಜ) ಶಿಕ್ಷಕಿಯರಿಗೆ 2022-23 ಸಾಲಿನ ವಿದ್ಯಾರ್ಥಿ ಶಿಕ್ಷಕಿಯರಿಗೆ ಡಿಪ್ಲೊಮಾ ಪ್ರಮಾಣ ಪತ್ರ ವಿತರಣೆ ಮತ್ತು ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿ ಶಿಕ್ಷಕಿಯರಿಗೆ ಪುರಸ್ಕಾರ ಸಮಾರಂಭವು ಕ್ರಿಸ್ಟಲ್ ಬಿಜ್ಹ್ ಹಬ್ನಲ್ಲಿ, ಶ್ರೀಮತಿ ಚಂದ್ರಕಲಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಅಜ್ಜರ್ಕಾಡು ಇಶ್ನಾ ಪ್ಲೇ ಸ್ಕೂಲ್’ನ ಸಹ-ಸ್ಥಾಪಕರಾದ ಶ್ರೀಮತಿ ಶಿಲ್ಪಾ ಆರ್. ಶೆಟ್ಟಿ ಮಾತನಾಡಿ, ಶಿಕ್ಷಕಿಯರು ತಾಳ್ಮೆಯು ಶಿಕ್ಷಕಿಯರಿಗೆ ಇರಲೇ ಬೇಕಾದ ಅನಿವಾರ್ಯ ಗುಣ. ವಿದ್ಯಾರ್ಥಿಗಳ ಆಸಕ್ತಿ, ಪ್ರತಿಭೆ ಇತ್ಯಾದಿಗಳನ್ನು ಗುರುತಿಸಿ ಅವರನ್ನು ಸರಿಯಾದ ಮಾರ್ಗದರ್ಶನದಲ್ಲಿ ಮುನ್ನೆಡೆಸುವುದು ಶಿಕ್ಷಕಿಯರ ಕರ್ತವ್ಯ. ಇನ್ನೋರ್ವ ಅತಿಥಿ ಶ್ರೀ ವಿಶ್ವನಾಥ ಕಾಮತ್ರವರು ಮಾತನಾಡಿ ವಿದ್ಯಾರ್ಥಿಗಳ ನಡತೆ, ಕೌಶಲ ಇತ್ಯಾದಿಗಳನ್ನು ಉಪಯೋಗಿಸಿ ಅವರನ್ನು ದೇಶದ ಒಂದು ಆಸ್ತಿಯನ್ನಾಗಿ ಮಾಡುವುದು ಶಿಕ್ಷಕಿಯರ ಜವಾಬ್ದಾರಿ ಎಂದರು.
ಕಾರ್ಯಕ್ರಮದಲ್ಲಿ ಶಾಂಭವಿ ಬಿಲ್ಡರ್ಸ್ನ ಮಾಲಕಿ ಶ್ರೀಮತಿ ಸೆಲಿನ್ ಅಪ್ಪು ಮರಕಾಲರವರು ಉಪಸ್ಥಿತದ್ದರು. 2022-23ನೇ ಸಾಲಿನ ಆ.ಒಇಜ ಪರೀಕ್ಷೆ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಶಿಷ್ಟ ಶ್ರೇಣಿ ಪಡಕೊಂಡ ವಿದ್ಯಾರ್ಥಿ ಶಿಕ್ಷಕಿ ಯರಾದ ಆಫಿಶೀನ್ ತಾಜ್ ಮತ್ತು ಶೆರೀನ್ ಜೊವಿಟರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಉಪನ್ಯಾಸಕರಾದ ಶ್ರೀಮತಿ ದಿವ್ಯಾ ಕೋಟ್ಯಾನ್ ಹಾಗೂ ಶ್ರೀ ವಿವೇಕ್ ಕಾಮತ್ರವರು ಉಪಸ್ಥಿತರಿದ್ದರು. ಪ್ರಾಂಶುಪಾಲೆ ಶ್ರೀಮತಿ ಸುನೀತಾರವರು ಅತಿಥಿಗಳನ್ನು ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಶ್ರೀಮತಿ ರೇಶ್ಮಾ ವಂದನಾರ್ಪಣೆಗೈದರು. ಶ್ರೀಮತಿ ಶ್ರಾವ್ಯ ಎಸ್. ಪಾಲನ್ , ಶ್ರೀಮತಿ ಸುಶ್ಮಾ ಪೈ ಹಾಗೂ ಶ್ರೀಮತಿ ನೂರ್ ಜಹಾನ್ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ 2023-24 ಸಾಲಿನ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.