ತೆಂಕಪೇಟೆ: ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಪುರುಷೋತ್ತಮ ಅಧಿಕ (ಶ್ರಾವಣ) ಮಾಸ ಪ್ರಯುಕ್ತ ಒಂದು ತಿಂಗಳ ಕಾಲ ಆಯೋಜಿಸಲಾಗಿದ್ದ ಅಹೋರಾತ್ರಿ ಭಜನಾ ಮಹೋತ್ಸವ ಗುರುವಾರದಂದು ಮಂಗಳದೊಂದಿಗೆ ಸಂಪನ್ನವಾಯಿತು.
ದೇವಳದ ಪ್ರಧಾನ ಅರ್ಚಕ ಮಂಗಳಾಚರಣೆಯ ಮಹಾ ಪೂಜೆ ನೆರವೇರಿಸಿದರು.
ಆಡಳಿತ ಮೊಕ್ತೇಸರ ಪಿ ವಿ ಶೆಣೈ , ಉಮೇಶ್ ಪೈ , ಮಟ್ಟಾರ್ ವಸಂತ ಕಿಣಿ , ವಿಶ್ವನಾಥ ಭಟ್ , ಪ್ರಕಾಶ್ ಶೆಣೈ, ಅಶೋಕ ಬಾಳಿಗಾ, ಗಣೇಶ ಕಿಣಿ, ರೋಹಿತಾಕ್ಷ ಪಡಿಯಾರ್, ಪುಂಡಲೀಕ ಕಾಮತ್ , ಅರ್ಚಕರಾದ ದಯಾಘನ್ ಭಟ್, ದೀಪಕ್ ಭಟ್, ಗಿರೀಶ ಭಟ್, ಭಜನಾ ರೂವಾರಿ ಸತೀಶ್ ಕಿಣಿ , ವಿವೇಕ ಶಾನಭೋಗ, ವಿಶಾಲ್ ಶೆಣೈ, ಭಾಸ್ಕರ್ ಶೆಣೈ, ಪಾಂಡುರಂಗ ಪೈ, ವ್ಯಾಸ ರಘುಪತಿ ಮಲ್ಯ, ಪ್ರಭಾಕರ್ ಭಟ್ ಹಾಗೂ ಭಜನಾ ಸಪ್ತಾಹ ಸಮಿತಿಯ ಸದಸ್ಯರು, ಜಿ ಎಸ್ ಬಿ ಯುವಕ ಮತ್ತು ಮಹಿಳಾ ಮಂಡಳಿ ಸದಸ್ಯರು ಹಾಗೂ ಸಮಾಜ ಭಾಂದವರು ಉಪಸ್ಥಿತರಿದ್ದರು.












