ಉಡುಪಿ: ಇತಿಹಾಸ ಪ್ರಸಿದ್ಧ 8 ನೇ ಶತಮಾನದಲ್ಲಿ ಗಾಲವ ಋಷಿ ತಪಸ್ಸು ಮಾಡಿದ್ದ ಕೀಳಂಜೆ ಶ್ರೀ ಮಹಾವಿಷ್ಣು ಮಹಾಲಿಂಗೇಶ್ವರ ದೇವರ ಸನ್ನಿಧಾನದಲ್ಲಿ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ ಮೂಡಿಬಂದಂತೆ ಪ್ರತಿ ವರ್ಷ ಸಿಂಹ ಮಾಸದ ಅಮಾವಾಸ್ಯೆ ದಿನ ಶ್ರೀಹರಿಹರ ತೀರ್ಥಕುಂಡದಲ್ಲಿ ವಾರ್ಷಿಕವಾಗಿ ತೀರ್ಥ ಉದ್ಭವಿಸುವ ಲಕ್ಷಣವಿದ್ದು, ಈ ದಿನದಂದು ಈ ಪವಿತ್ರ ಸರೋವರದಲ್ಲಿ ತೀರ್ಥ ಸ್ನಾನ ಮಾಡಿದಲ್ಲಿ ಭಕ್ತಾದಿಗಳ ಶಾರೀರಿಕ ಖಾಯಿಲೆಗಳು, ಮುಖ್ಯವಾಗಿ ಚರ್ಮರೋಗ ನಿವಾರಣೆಯಾಗುವುದಲ್ಲದೆ ಸದ್ಭಕ್ತರ ಸಕಲ ಇಷ್ಟಾರ್ಥವು ನೆರವೇರಲಿದೆ ಎಂದು ಪ್ರಶ್ನೆಯಲ್ಲಿ ತಿಳಿದು ಬಂದಿರುತ್ತದೆ.
ಆದ್ದರಿಂದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಸನ್ನಿಹಿತವಾಗಿರುವ ಈ ಕ್ಷೇತ್ರದಲ್ಲಿ ಸದ್ಭಕ್ತರೆಲ್ಲರೂ ತಾರೀಕು 23.08.2025 ನೇ ಶನಿವಾರ ಅಮಾವಾಸ್ಯೆಯ ದಿನ ಈ ಪವಿತ್ರ ಸರೋವರದಲ್ಲಿ ತೀರ್ಥ ಸ್ನಾನ ಮಾಡಿ ಶ್ರೀ ದೇವರಿಗೆ ಯಥಾನುಶಕ್ತಿ ಸೇವೆ ಸಲ್ಲಿಸಲು ಅವಕಾಶ ಇದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.












