ಶ್ರೀಗುರುರಾಯರ 355ನೇ ಆರಾಧನಾ ಮಹೋತ್ಸವ: ಮೊದಲ ದಿನ ಮಹಾಪೂಜೆ

ಉಡುಪಿ: ಶ್ರೀಗುರುರಾಯರ 355ನೇ ಆರಾಧನಾ ಮಹೋತ್ಸವದ ಅಂಗವಾಗಿ ಉಡುಪಿ ರಾಘವೇಂದ್ರ ಮಠದಲ್ಲಿ ಮೊದಲ ದಿನದ ಮಹಾಪೂಜೆ ಭಕ್ತಿಭಾವದಿಂದ ನೆರವೇರಿತು.

ಆರಾಧನಾ ಮಹೋತ್ಸವದ ಪ್ರಯುಕ್ತ ಬೆಳಗ್ಗಿನಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ವಿಶೇಷ ಪೂಜೆ, ಅಭಿಷೇಕ ಹಾಗೂ ಧಾರ್ಮಿಕ ವಿಧಿವಿಧಾನಗಳಲ್ಲಿ ಭಕ್ತರು ಪಾಲ್ಗೊಂಡರು. ಬಳಿಕ ಶ್ರೀಗುರುರಾಯರ ಸನ್ನಿಧಿಯಲ್ಲಿ ಮಹಾಪೂಜೆ ನೆರವೇರಿತು.

ಮಹಾಪೂಜೆಯ ಸಂದರ್ಭದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಉಪಸ್ಥಿತರಿದ್ದು, ಶ್ರೀಗುರುರಾಯರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.