ಕಾರ್ಕಳ: ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಸದ್ಭಾವನಾ ದಿನಾಚರಣೆ

ಕಾರ್ಕಳ:  ಇಲ್ಲಿನ ಶ್ರೀ ಭುವನೇಂದ್ರ ಕಾಲೇಜಿನ ಎನ್ನೆಸ್ಸೆಸ್ ಘಟಕ ಹಾಗೂ ಮಾನವ ಹಕ್ಕು ಧಾರ್ಮಿಕ ಸೌಹಾರ್ದತಾ ಘಟಕ ಇದರ ವತಿಯಿಂದ ಸದ್ಭಾವನಾ ದಿನಾಚರಣೆ ಹಾಗೂ ಕೋಮು ಸೌಹಾರ್ದ ಪಾಕ್ಷಿಕವನ್ನು ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ  ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಟಿ.ಎಂ ಆನಂದ್ ಮಾತನಾಡಿ,  ಸೌಹಾರ್ದತೆಯ ಬದುಕು ಜೀವನದಲ್ಲಿ ಬಹಳ ಮುಖ್ಯವಾದುದು, ಜಾತಿ ಧರ್ಮಗಳ ಭೇದವಿಲ್ಲದೆ ಎಲ್ಲರೂ ಒಂದೇ ಎಂಬ ಭಾವನೆಯನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕು. ಪರಸ್ಪರ ಸಮಾನತೆ ಹಾಗೂ ಹೊಂದಾಣಿಕೆಯ ಬದುಕು ಸಮಾಜದಲ್ಲಿ ಅಗತ್ಯವಾದುದು ಹಾಗಾಗಿ ಸೌಹಾರ್ದತಾ ಬದುಕು ನಮ್ಮದಾಗಬೇಕು ಎಂದು ಹೇಳಿದರು.

ಎನ್ನೆಸ್ಸೆಸ್ ಅಧಿಕಾರಿ ಸುಚಿತ್ರಾ ಪ್ರಸ್ತಾವಿಕ ಮಾತುಗಳನ್ನಾಡಿ ಸದ್ಭಾವತೆಯ ಪ್ರಮಾಣವಚನವನ್ನು ಭೋಧಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಎನ್ನೆಸ್ಸೆಸ್ ಅಧಿಕಾರಿ ಶಿವಶಂಕರ್, ವಿದ್ಯಾರ್ಥಿ ಕಾರ್ಯದರ್ಶಿಗಳಾದ ಸಚಿನ್ ಹಾಗೂ ಶಿಶಿರ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ವಿದ್ಯಾರ್ಥಿನಿ ಸೌಜನ್ಯ ಶೆಟ್ಟಿ ನಿರೂಪಿಸಿದರು.