ನ.24: ಆದಿ ಶಕ್ತಿ ಮಹಾಲಕ್ಷ್ಮೀ ದೇವಸ್ಥಾನ ಲಕ್ಷ್ಮೀಪುರ ಹಿರ್ಗಾನ: ಶ್ರೀ ಶಿವಾನಂದಸರಸ್ವತಿ ಸಭಾಭವನ ಉದ್ಘಾಟನೆ

ಕಾರ್ಕಳ: ಇಲ್ಲಿನ ಆದಿ ಶಕ್ತಿ ಮಹಾಲಕ್ಷ್ಮೀ ದೇವಸ್ಥಾನ  ಲಕ್ಷ್ಮೀಪುರ  ಹಿರ್ಗಾನ  ಇಲ್ಲಿ  ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಶಿವಾನಂದಸರಸ್ವತಿ ಸಭಾಭವನ ಉದ್ಘಾಟನೆ  ನ.24 ರಂದು ಪೂರ್ವಾಹ್ನ 10 ಕ್ಕೆ ನೆರವೇರಲಿದೆ. ಸಭಾಭವನದ ಉದ್ಘಾಟನೆಯನ್ನು ಗೋವಾ ಕವಳೆ ಮಠದ  ಶ್ರೀ ಶಿವಾನಂದ ಸರಸ್ವತೀ  ಸ್ವಾಮೀ ಮಹಾರಾಜ್ ಉದ್ಘಾಟಿಸಲಿದ್ದಾರೆ. ಸಭಾಭವನ ನಿರ್ಮಾಣ ಸಮಿತಿ ಅಧ್ಯಕ್ಷ  ಗೋಕುಲ್ ದಾಸ್ ನಾಯಕ್, ಅಧ್ಯಕ್ಷತೆ ವಹಿಸಲಿದ್ದಾರೆ.

ಗೃಹ ಸಚಿವ ಬಸವರಾಜ್ ಬೊಮ್ಮಾಯಿ,, ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಮುಖ್ಯಮಂತ್ರೀ ವೀರಪ್ಪ ಮೊಯಿಲಿ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಸುನಿಲ್ ಕುಮಾರ್, ಮೊದಲಾದವರು ಭಾಗವಹಿಸಲಿದ್ದಾರೆ.

ಅಂದು ಸಂಜೆ 4.30 ಕ್ಕೆ  ದಾನಿ, ಕರಸೇವಕರಿಗೆ ಅಭಿನಂದನಾ ಸಮಾರಂಭ ನಡೆಯಲಿದೆ.ಗೋವಾ ಕವಳೆ ಮಠದ  ಶ್ರೀ ಶಿವಾನಂದ ಸರಸ್ವತೀ  ಸ್ವಾಮೀ ಮಹಾರಾಜ್ ಆಶೀರ್ವಚನ ನೀಡಲಿದ್ದು,ಸಭಾಭವನ ನಿರ್ಮಾಣ ಸಮಿತಿ ಅಧ್ಯಕ್ಷ  ಗೋಕುಲ್ ದಾಸ್ ನಾಯಕ್ ಅಧ್ಯಕ್ಷತೆ ವಹಿಸಲಿದ್ದಾರೆ.ಸಭಾಭವನ ನಿರ್ಮಾಣ ಸಮಿತಿ ಕಾರ್ಯಾಧ್ಯಕ್ಷ ಸಂತೋಷ್ ವಾಗ್ಳೆ, ದೇವಸ್ಥಾನದ ಆಡಳಿತ ಮೊಕ್ತೇಸರ  ರಘುರಾಮ ಪ್ರಭು, ಹಾಗೂ ಸಹಮೊಕ್ತೇಸರರು, ಸಮಾಜದ ಮುಖಂಡರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ವೈವಿದ್ಯಮಯ  ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.