ಈಗ ಎಲ್ಲೆಲ್ಲೂ ಹೃದಯಾಘಾತಗಳದ್ದೇ ಸುದ್ದಿ, ಹೃದಯದ ವಿವಿಧ ಖಾಯಿಲೆಗಳು ಯಾವಾಗ ಸಂಭವಿಸುತ್ತೆ ಎಂದು ಹೇಳುವುದೇ ಕಷ್ಟಕರ. ಇಂತಹ ಸಂದರ್ಭದಲ್ಲಿ ಆರೋಗ್ಯಕರ ಜೀವನಶೈಲಿಯ ಅಳವಡಿಕೆಯೇ ಒಂದು ಪರಿಹಾರ ಎನ್ನುವ ಚರ್ಚೆ ನಡೆಯುತ್ತಿದೆ. ಹಾಗಾದ್ರೆ ನೀವು ಮನೆಯಲ್ಲಿಯೇ ಸಿಂಪಲ್ಲಾಗಿ ಮಾಡಬಹುದಾದ ಆರೋಗ್ಯಕರ ಟಿಪ್ಸ್ ಒಂದು ಇಲ್ಲಿದೆ.
ಬೆಳ್ಳುಳ್ಳಿ ಕೆಲವು ಅಸಾಧಾರಣ ಆರೋಗ್ಯ ಪ್ರಯೋಜನಗಳಿಂದ ತುಂಬಿದೆ. ಮೊಳಕೆಯೊಡೆದ ಬೆಳ್ಳುಳ್ಳಿ ಪ್ರೋಟೀನ್, ಕಾರ್ಬೋಹೈಡ್ರೇಟ್‌ಗಳು ಮತ್ತು ಆಹಾರದ ನಾರಿನಂಶದಿಂದ ಸಮೃದ್ಧವಾಗಿದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕ ಅಂಶಗಳು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಬೆಳ್ಳುಳ್ಳಿಯಲ್ಲೇನಿದೆ?
ಬೆಳ್ಳುಳ್ಳಿಯಲ್ಲಿ ನೈಟ್ರೇಟ್‌ಗಳು ಅಧಿಕವಾಗಿದೆ. ಇದರಿಂದ ಅಪಧಮನಿಗಳು ಹಿಗ್ಗುತ್ತದೆ .ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ. ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ. ಮೊಳಕೆಯೊಡೆದ ಬೆಳ್ಳುಳ್ಳಿಯನ್ನು ಪ್ರತಿದಿನ ಸೇವಿಸುವುದರಿಂದ ಹೃದಯಾಘಾತದಂತಹ ಕಾಯಿಲೆಗಳನ್ನು ಸಹ ತಡೆಯಬಹುದು ಎನ್ನುವುದು ಮುಖ್ಯವಾದ ಅಂಶ.
ಬೆಳ್ಳುಳ್ಳಿಯಲ್ಲಿ ಕಿಣ್ವ ಅಂಶ
ಬೆಳ್ಳುಳ್ಳಿಯಲ್ಲಿ ಕಿಣ್ವ ಅಂಶ ಜಾಸ್ತಿಯಿದ್ದು. ಇದರಿಂದ ಹೃದಯವನ್ನು ಆರೋಗ್ಯವಾಗಿಡಲು ಅನುಕೂಲ. ತಾಜಾ ಬೆಳ್ಳುಳ್ಳಿಗಿಂತ ಮೊಳಕೆಯೊಡೆದ ಬೆಳ್ಳುಳ್ಳಿಯಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಹೆಚ್ಚಿನ ಪ್ರಮಾಣದಲ್ಲಿದೆ ಹಾಗಾಗಿ ಮೊಳಕೆಯೊಡೆದ ಬೆಳ್ಳುಳ್ಳಿ ಸೇವನೆ ಒಳ್ಳೆಯದು. ಈ ಬೆಳ್ಳುಳ್ಳಿಯನ್ನು ವಿವಿಧ ಆಹಾರಗಳಿಗೆ ಸೇರಿಸಿ ತಿನ್ನುವುದರಿಂದಲೂ ಅನುಕೂಲಗಳಿವೆ. ಮೊಡವೆಗಳು, ದೇಹದ ಸುಕ್ಕುಗಳು ಕೂಡ ಕಡಿಮೆಯಾಗುತ್ತದೆ.












