ಉಡುಪಿ: ಉಡುಪಿಯ ಶೆಫಿನ್ಸ್ ಎಜುಕೇಶನಲ್ ಎಂಡ್ ಚಾರಿಟೇಬಲ್ ವತಿಯಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಅತಿಥಿ ಹಾಗೂ ಗೌರವ ಶಿಕ್ಷಕರಿಗೆ ಉಚಿತ ಸ್ಪೋಕನ್ ಇಂಗ್ಲೀಷ್ ತರಬೇತಿ ಕಾರ್ಯಕ್ರಮವು ನಗರದಲ್ಲಿ ನ. 28 ರಿಂದ 1ರ ವರೆಗೆ (ಒಟ್ಟು 4 ದಿನ) ನಡೆಯಲಿರುವುದು.
ಈ ತರಬೇತಿಯು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಈ ಶೈಕ್ಷಣಿಕ ವರ್ಷದ ಕೊನೆಯ ತರಬೇತಿಯಾಗಿದೆ.
ತರಬೇತಿಗೆ ತಮ್ಮ ಶಾಲಾ ಅತಿಥಿ ಹಾಗೂ ಗೌರವ ಶಿಕ್ಷಕರನ್ನು ಕಳುಹಿಸಲು ಆಸಕ್ತರಿರುವ ಶಾಲಾ ಮುಖ್ಯಸ್ಥರುಗಳು ನ. 24 ರೊಳಗಾಗಿ ನೋಂದಾಯಿಸಿಕೊಳ್ಳಬೇಕಾಗಿದ್ದು,
ತರಬೇತಿಯ ಬಳಿಕ ಆಯಾಯ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಾದ ಶಿಕ್ಷಕರು ಸ್ಪೋಕನ್ ಇಂಗ್ಲಿಷ್ ತರಬೇತಿ ನಡೆಸಿಕೊಡಲಿದ್ದಾರೆ.
ಇದರಿಂದಾಗಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಶಾಲಾ ದಾಖಲಾತಿಯಲ್ಲಿ ಕನಿಷ್ಠ 20% ಹೆಚ್ಚುವರಿಯನ್ನು ನಿರೀಕ್ಷಿಸಲಾಗಿದೆ ಹಾಗೂ ಆ ಮೂಲಕ ಕನ್ನಡ ಮಾಧ್ಯಮ ಶಾಲೆಗಳ ಬೆಳವಣಿಗೆಗೆ ಕೊಡುಗೆ ನೀಡುವಲ್ಲಿ ಮಹತ್ವದ ಪಾತ್ರ ವಹಿಸಲಿದೆ.
ಶಿಕ್ಷಕರಿಗೆ ತರಬೇತಿಯು ಸಂಪೂರ್ಣ ಉಚಿತವಾಗಿರುತ್ತದೆ. ಆದರೆ ಶಾಲೆಗಳಲ್ಲಿನ ವಿದ್ಯಾರ್ಥಿಗಳ ವರ್ಕ್ ಬುಕ್ ಗಾಗಿ ಪ್ರತಿ ವಿದ್ಯಾರ್ಥಿಗೆ ರೂ. 350/- ರಂತೆ ದಾನಿಗಳಿಂದ ದೇಣಿಗೆ ಸಂಗ್ರಹಿಸಬೇಕಾಗಿರುತ್ತದೆ. ಇದಕ್ಕಾಗಿ SDMC ಯವರು ದಾನಿಗಳನ್ನು ಸಂಪರ್ಕಿಸಬಹುದಾಗಿದೆ.
ದೇಣಿಗೆ ನೀಡಿದ ದಾನಿಗಳಿಗೆ ಸೆಕ್ಷನ್ 80ಜಿ ಯ ಅನ್ವಯ ತೆರಿಗೆ ವಿನಾಯಿತಿ ಇರುವುದರಿಂದ ಪ್ರಸಕ್ತ ವರ್ಷ ಆದಾಯ ತೆರಿಗೆ ಪಾವತಿಸುವ ಯಾವುದೇ ವ್ಯವಹಾರಸ್ಥರು, ಸರ್ಕಾರಿ ಅಥವಾ ಅರೆ ಸರಕಾರಿ ನೌಕರರು ದೇಣಿಗೆ ನೀಡುವ ಮೂಲಕ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗುವುದರೊಂದಿಗೆ ಶಾಲೆಯನ್ನು ಉಳಿಸುವ ಕೆಲಸಕ್ಕೆ ತಮ್ಮನ್ನು ತೊಡಗಿಸಿಕೊಳ್ಳಬಹುದು. ಜೊತೆಗೆ ತೆರಿಗೆ ವಿನಾಯತಿಯೂ ಲಭ್ಯವಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಹೆಚ್ಚಿನ ವಿವರಗಳಿಗೆ ಮತ್ತು ಶಿಕ್ಷಕರ ನೊಂದಣಿಗಾಗಿ ಸಂಪರ್ಕಿಸಿರಿ: 9008418534 (ಮನೋಜ್ ಕಡಬ)