ಸ್ಲೆಂಡರ್ (splendor) ಬೈಕ್ ಒಂದು ಕಾಲದಲ್ಲಿ ಬೈಕ್ ಪ್ರಿಯರಲ್ಲಿ ಸಂಚಲನ ಉಂಟು ಮಾಡಿದ ಕ್ಲಾಸ್ ಬೈಕ್.ಈಗಲೂ ನೂರಾರು ಹೊಸ ಹೊಸ ಬೈಕ್ ಗಳು ಮಾರುಕಟ್ಟೆಗೆ ಬಂದಿದ್ದರೂ ಸ್ಲೆಂಡರ್ ಬೈಕ್ ತನ್ನ ಅಸ್ತಿತ್ವ ಬಿಟ್ಟುಕೊಟ್ಟಿಲ್ಲ.
ಈ ಬೈಕ್ ಗಳನ್ನು ವಿಂಟರ್ ಮತ್ತು ಮಾಡರ್ನ್ ಲುಕ್ ಗಳೊಂದಿಗೆ ನವೀಕರಿಸಿ ರಸ್ತೆಯಲ್ಲಿ ಮಹಾರಾಜರಂತೆ ಸದ್ದು ಮಾಡುತ್ತ ಹೋಗುವ ಬೈಕ್ ಪ್ರಿಯರು ಇದ್ದಾರೆ. ಇದರ ಮೈಲೇಜ್ ಮತ್ತು ಕಾರ್ಯದಕ್ಷತೆಯನ್ನು ಕೊಂಡಾಡುವವರೂ ಇದ್ದಾರೆ. ಭಾರತದಲ್ಲಿ ಸ್ಲೆಂಡರ್ ಬೈಕ್ ನಷ್ಟು ಸದ್ದು ಮಾಡಿದ ಬೈಕ್ ಬೇರೊಂದಿಲ್ಲ.

ಈಗ ವಿಷಯ ಏನಪ್ಪಾ ಅಂದ್ರೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಈ ಟ್ರೆಂಡ್ ನಲ್ಲಿ ಹೀರೋ ಕಂಪೆನಿ ತನ್ನ ಜನಪ್ರಿಯ ಬೈಕ್ ಸ್ಲೆಂಡರ್ ಗೆ ಎಲೆಕ್ಟ್ರಿಕ್ ಟಚ್ ಕೊಡಲು ಹೊರಟಿದೆ. ಹೌದು ಹೀರೋ ಕಂಪೆನಿ ರಾಜಸ್ಥಾನದಲ್ಲಿರುವ ತನ್ನ ಘಟಕದಲ್ಲಿ ಇದಕ್ಕೆಂದೆ ಹೊಸ ತಂತ್ರಜ್ಞರನ್ನು ನೇಮಿಸಿ ಯೋಜನೆ ರೂಪಿಸಿದೆ.
ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ವರುಷದ ಆರಂಭದಲ್ಲಿ ಸ್ಲೆಂಡರ್ ev ಬೈಕ್ ಅದ್ದೂರಿ ಬಿಡುಗಡೆಯಾಗಿ ಮಾರುಕಟ್ಟೆಯಲ್ಲಿ ಧೂಳೆಬ್ಬಿಸೋದು ಗ್ಯಾರಂಟಿ.

ಕಂಪೆನಿ ವಾರ್ಷಿಕ 2,00,000 ಬೈಕ್ ಗಳನ್ನ ತಯಾರಿಸುವ ಪ್ಲಾನ್ ರೂಪಿಸಿದೆ. ಬೈಕ್ 4& 6 ಕಿಲೋ ವ್ಯಾಟ್ ಬ್ಯಾಟರಿಯೊಂದಿಗೆ ಪೂರ್ಣ ಚಾರ್ಜ್ ನಲ್ಲಿ ಸುಮಾರು 120-150 ಕಿ.ಮೀ ದೂರ ಬೈಕ್ ಓಡುತ್ತದೆಯಂತೆ. ಬೈಕ್ ನ ಬೆಲೆ ಸುಮಾರು 1 ಲಕ್ಷ ಎನ್ನಲಾಗಿದೆ. ಜೊತೆಗೆ ಸ್ಟೈಲಿಶ್ ಕೂಡ ಆಗಿರಲಿದೆ ಎಂದು ಮೂಲಗಳು ತಿಳಿಸಿದೆ. ಆದರೆ ಈ ಬೈಕ್ ನಲ್ಲಿ ಕೆಲವು ಹೊಸ ನಾವೀನ್ಯತೆಗಳೂ ಇದ್ದು ಅದೇನೆಂದು ಕಂಪೆನಿ ಬಿಟ್ಟು ಕೊಟ್ಟಿಲ್ಲ. ಅಂತೂ splendor ಬೈಕ್ ಪ್ರಿಯರಿಗೆ ಕಾತರದಿಂದ ಕಾಯುವಂತೆ ಮಾಡಿದೆ ಹೀರೋ ಕಂಪೆನಿ.












