ಉಡುಪಿ: ಜೀವ ಉಳಿಸಬೇಕಾಗಿರುವ ಆಂಬ್ಯುಲೆನ್ಸ್ ಜೀವ ತೆಗೆಯಲು ಕಾರಣವಾದಂತಹ ದಾರುಣ ಘಟನೆ ಶಿರೂರಿನಲ್ಲಿ ನಡೆದಿದೆ. ಅತೀ ವೇಗದಿಂದ ಬರುತ್ತಿದ್ದ ಆಂಬ್ಯುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಟೋಲ್ ಕಂಬಕ್ಕೆ ಹೊಡೆದಪ್ಪಳಿಸಿ, ಹೊಡೆದ ರಭಸಕ್ಕೆ ಆಂಬುಲೆನ್ಸ್ ಒಳಗಿದ್ದವರು ಹೊರಗೆ ಎಸೆಯಲ್ಪಟ್ಟಿದ್ದಾರೆ. ಇವರಲ್ಲಿ ಮೂವರು ಗಂಭೀರವಾಗಿ ಗಾಯಗೊಂಡರೆ ಮತ್ತು ಓರ್ವನ ಸ್ಥಿತಿ ಚಿಂತಾಜನಕವಾಗಿದೆ. ಹೊನ್ನಾವರದಿಂದ ಕುಂದಾಪುರಕ್ಕೆ ರೋಗಿಗಳನ್ನು ಸಾಗಿಸುತ್ತಿದ್ದ ಆಂಬ್ಯುಲೆನ್ಸ್ ನಿಯಂತ್ರಣ ತಪ್ಪಿ ಟೋಲ್ ಕಂಬಕ್ಕೆ ಢಿಕ್ಕಿ ಹೊಡೆದಿದೆ.
ಆಂಬುಲೆನ್ಸ್ ಬರುತ್ತಿದುದ್ದನ್ನು ಕಂಡು ರಸ್ತೆಗಳವಡಿಸಿದ್ದ ಬ್ಯಾರಿಕೇಡ್ ತೆಗೆಯಲು ಧಾವಿಸಿದ ಟೋಲ್ ಗೇಟ್ ಸಿಬ್ಬಂದಿಗಳೂ ಗಾಯಗೊಂಡಿದ್ದು, ಎಲ್ಲರನ್ನೂ ಕುಂದಾಪುರದ ಆಸ್ಪತ್ರೆಗೆ ಸಾಗಿಸಲಾಗಿದೆ.