ನವರಾತ್ರಿಯಲ್ಲಿ ರಾಮಲಲ್ಲಾನಿಗೆ ವಿಶೇಷ ವಸ್ತ್ರಗಳು: ವೈಷ್ಣವ ಚಿಹ್ನೆ ಮುದ್ರಿತ ಖಾದಿ ವಸ್ತ್ರಗಳಿಂದ ಸುಶೋಭಿತ ನಮ್ಮ ಶ್ರೀರಾಮ

ಅಯೋಧ್ಯೆ: ಚೈತ್ರ ನವರಾತ್ರಿಯ ಮೊದಲ ದಿನದಿಂದ ರಾಮನವಮಿಯವರೆಗೆ ಭಗವಾನ್ ಶ್ರೀ ರಾಮಲಲ್ಲಾ ಸರ್ಕಾರ್ ನ ವಸ್ತ್ರವು ವಿಶೇಷವಾಗಿರಲಿದೆ ಎಂದು ಶ್ರೀ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದೆ.

ವಿಶೇಷವಾಗಿ ಕೈಯಿಂದ ನೇಯ್ದು ಮಾಡಿದಂತಹ ಖಾದಿ ಹತ್ತಿಯಿಂದ ಮಾಡಿದ ವಸ್ತ್ರವನ್ನು ರಾಮಲಲ್ಲಾಗೆ ತೊಡಿಸಲಾಗುತ್ತಿದ್ದು, ಇದರ ಮೇಲೆ ಕೈಯಿಂದಲೇ ಮುದ್ರಿತ ನೈಜ ಚಿನ್ನದ-ಬೆಳ್ಳಿ (ಖಡ್ಡಿ) ಮುದ್ರೆಗಳನ್ನು ರಚಿಸಲಾಗುತ್ತದೆ. ವಸ್ತ್ರದ ಮೇಲಿನ ಈ ಮುದ್ರಣಗಳು ವೈಷ್ಣವ ಚಿಹ್ನೆಗಳನ್ನು ಹೊಂದಿರಲಿವೆ ಎಂದು ಟ್ರಸ್ಟ್ ತಿಳಿಸಿದೆ.