ನವದೆಹಲಿ: ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾಗಳ (Toll Plazas) ಸಮೀಪ ವಾಸಿಸುವವರಿಗೆ, ಆಗಾಗ್ಗೆ ಪ್ರಯಾಣಿಸಲು ಶೀಘ್ರದಲ್ಲೇ ಅಗ್ಗದ ಆಯ್ಕೆಯೊಂದು ಲಭ್ಯವಾಗಲಿದೆ. ನವೆಂಬರ್ 1 ರಿಂದ, ಅರ್ಹ ಖಾಸಗಿ ವಾಹನ ಮಾಲೀಕರಿಗಾಗಿ ಕೇಂದ್ರ ಸರ್ಕಾರವು ವಿಶೇಷ ವಾರ್ಷಿಕ ಪಾಸ್ ಅನ್ನು ಪರಿಚಯಿಸುತ್ತಿದೆ.
ಹೊಸ ಯೋಜನೆಯ ಅಡಿಯಲ್ಲಿ ಅರ್ಹ ಟೋಲ್ ಪ್ಲಾಜಾದ 20 ಕಿ.ಮೀ ವ್ಯಾಪ್ತಿಯಲ್ಲಿ ವಾಸಿಸುವ ನಿವಾಸಿಗಳು, ಆ ಪ್ಲಾಜಾ ಇರುವ ಸ್ಥಳವನ್ನು ಅವಲಂಬಿಸಿ, 1,500 ರೂ. ಅಥವಾ 3,000 ರೂ. ದರದಲ್ಲಿ ವಾರ್ಷಿಕ ಪಾಸ್ ಪಡೆಯಬಹುದು.
ನಗರ ವ್ಯಾಪ್ತಿಯ ಟೋಲ್ ಪ್ಲಾಜಾಗಳಿಗೆ ವಾರ್ಷಿಕ ಪಾಸ್ ಶುಲ್ಕ 3,000 ರೂ. ಹಾಗೂ ಗ್ರಾಮೀಣ ವ್ಯಾಪ್ತಿಯ ಟೋಲ್ ಪ್ಲಾಜಾಗಳಿಗೆ ವಾರ್ಷಿಕ ಪಾಸ್ ಶುಲ್ಕ 1,500 ರೂ. ಇದೆ.
ಳೀಯ ನಿವಾಸಿಗಳಿಗೆ ಟೋಲ್ ಶುಲ್ಕ ಪಾವತಿಯಲ್ಲಿ ಅನುಕೂಲ ಕಲ್ಪಿಸಲು ಈ ಕ್ರಮಕೈಗೊಳ್ಳಲಾಗುವುದು. ವಿಶೇಷ ವಾರ್ಷಿಕ ಪಾಸ್ ವ್ಯವಸ್ಥೆ ಜಾರಿಗೆ ತರಲು ಕೇಂದ್ರ ಸರ್ಕಾರದ ನಿರ್ಧಾರಿಸಿದೆ.















