ಕುಂದಾಪುರ: ಸೌದಿ ದೊರೆ ಹಾಗೂ ಮೆಕ್ಕಾದ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದಲ್ಲಿ ಸೌದಿ ಪೊಲೀಸರಿಂದ ಬಂಧಿಯಾದ ಹರೀಶ್ ಬಂಗೇರ ಬಿಡುಗಡೆ ಪ್ರಯತ್ನ ನಡೆದಿದೆ. ಹರೀಶ್ ಪತ್ನಿ ಸುಮನಾ ಹಾಗೂ ಕುಟುಂಬದವರು ಮಂಗಳವಾರ ಉಡುಪಿ ಮಾನವ ಹಕ್ಕು ಪ್ರತಿಷ್ಠಾನ ಅಧ್ಯಕ್ಷ ರವೀಂದ್ರನಾಥ್ ಶ್ಯಾನುಭಾಗ್ ಭೇಟಿ ಮಾಡಿ ಹರೀಶ್ ಫೇಸ್ಬುಕ್ ಅಕೌಂಟ್ ಫೇಕ್ ಎಂದು ನಿರೂಪಿಸಲಾಗುವ ಎಲ್ಲಾ ದಾಖಲಗೆಗಳ ಕಲೆ ಹಾಕಿದ್ದು, ಉಡುಪಿ ಪೊಲೀಸ್ ಇಲಾಖೆ ಎಲ್ಲಾ ಮಾಹಿತಿ ಸ್ಟೇಟ್ ಇಂಟಿಲಿಜೆನ್ಸ್ ಕಚೇರಿಗೆ ರವಾನಿಸಿದೆ. ಹರೀಶ್ ನಿರಪರಾದಿ ಎಂದು ನಿರೂಪಿಸುವ ಎಲ್ಲಾ ದಾಖಲೆಗಳನ್ನು ತೆಗೆಯಲಾಗಿದ್ದು, ಮತ್ತಿನ್ನೇನಿದ್ದರೂ ಮಾಹಿತಿ ಸೌದಿ ಪೊಲೀಸರು ಕೇಳಿದರೆ ಒದಗಿಸುವ ಎಲ್ಲಾ ಸಿದ್ದತೆ ಮಾನವಹಕ್ಕು ಪ್ರತಿಷ್ಠಾನ ಮಾಡಿಕೊಂಡಿದೆ.
ರವೀಂದ್ರ ನಾಯಕ್ ಏನು ಹೇಳುತ್ತಾರೆ?
ಡಿ.೧೯ ರಿಂದ ೨೧ನೇ ತಾರೀಕು ಸಂಜೆ ೮ ಗಂಟೆ ತನಕ ಯಾವ ಯಾವ ಗಳಿಗೆಯಲ್ಲಿ ಏನು ಘಟನೆ ನಡೆದಿದೆ ಎನ್ನುವುದನ್ನು ಇಂಚಿಂಚು ಸಿದ್ದಿಪಡಿಸಿದ ಮಾಹಿತಿ ದಾಖಲಿಸಿ, ಪತ್ರ ಸಿದ್ದಪಡಿಸಲಾಗಿದೆ. ಡಿ.೨೦ ರಾತ್ರಿ ೧೨.೩೦ಕ್ಕೆ ಇನ್ನೊಂದು ಫೇಸ್ ಬುಕ್ ಐಡಿ ಕ್ರಿಯೇಟ್ ಮಾಡಿ, ರಾತ್ರಿಯೇ ಕೆಲವು ಪೊಟೋ ಅಪ್ ಲೋಡ್ ಮಾಡಿ, ಸೌದಿ ದೊರೆ ಅವಮಾನ ಪೋಸ್ಟ್ ಮಾಡಿದ ಸಮಯ ಸಹಿತ ವಿವರ ಸಂಗ್ರಹಿಸಲಾಗಿದೆ ಎಂದು ಮಾನವ ಹಕ್ಕು ಪ್ರತಿಷ್ಠಾನ ಅಧ್ಯಕ್ಷ ರವೀಂದ್ರನಾಥ್ ಶ್ಯಾನುಭಾಗ್ ತಿಳಿಸಿದ್ದಾರೆ.
ಫೇಸ್ ಬುಕ್ ಐಡಿ ಫೇಕ್ ಎನ್ನೋದು ದೃಢ ಪಟ್ಟಿದ್ದು, ಹರೀಶ್ ಫೇಸ್ ಬುಕ್ ನಂಬರ್ ಹಾಗೂ ಮತ್ತೊಂದು ಫೇಸ್ ಬುಕ್ ಐಡಿ ನಂಬರ್ ಬೇರೆಯಾಗಿದ್ದು, ಇದರಿಂದ ಫೇಕ್ ಐಡಿ ಕ್ರಿಯೇಟ್ ಮಾಡಲಾಗಿದೆ ಎನ್ನುವುದನ್ನು ಪ್ರೂವ್ ಮಾಡಲಾಗಿದೆ. ಎಲ್ಲಾ ಮಾಹಿತಿಯ ಲೆಟರ್ ಇಂಡಿಯನ್ ರಾಯಬಾರಿ ಕಚೇರಿಗೆ ಕಳುಹಿಸಲಾಗಿದೆ. ಹಾಗೆ ರಾಯಬಾರಿ ಕಚೇರಿ ಮತ್ತೇನಾದರೂ ಮಾಹಿತಿ ಕೇಳಿದರೆ ಒದಗಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ರಾಯಬಾರಿ ಕಚೇರಿಗೆ ಸೌದಿಯಲ್ಲಿರುವ ಹರೀಶ್ ಸ್ನೇಹಿತರ ನಂಬರ್ ಕೂಡಾ ಕೊಡಲಾಗಿದೆ. ಸ್ನೇಹಿತರು ಸಹಕರಿಸಿದರೆ ಹರೀಶ್ ಕೂಡಲೇ ಬಿಡುಗಡೆ ಆಗುವ ಸಾಧ್ಯತೆ ಇದೆ. ಉಡುಪಿ ಪೊಲೀಸರು ಕೂಡಾ ಅಮೆರಿಕಾ ಫೇಸ್ಬುಕ್ ಸಂಸ್ಥೆಗೆ ಫೇಕ್ ಐಡಿ ಕ್ರಿಯೇಟ್ ಮಾಡಿದ ವಿವರ ಕೇಳಿದ್ದು, ಅದು ಸಿಗುವುದು ಮೂರು ದಿನ ತಡವಾಗಲಿದೆ. ಪೇಸ್ ಬುಕ್ ಸಂಸ್ಥೆಯಿಂದ ಅಕೌಂಟ್ ಫೇಕ್ ಎಂದು ಬಂದರೆ ಹರೀಶ್ ಬಿಡುಗಡೆ ಸುಲಭವಾಗಲಿದೆ.