ನಿನ್ನೆಯಿಂದ ತಾನು ನೀಡಿದ ಹೇಳಿಕೆಯ ಕಾರಣಕ್ಕೆ ಗಾಯಕ ಸೋನು ನಿಗಮ್ ಕನ್ನಡಿಗರ ಆಕ್ರೋಶಕ್ಕೆ ಕಾರಣರಾಗುತ್ತಲೇ ಇದ್ದಾರೆ. ಕನ್ನಡ ಕನ್ನಡ ಎಂದಿದ್ದಕ್ಕೆ ಪಹಲ್ಗಾಮ್ ದಾಳಿಯಾಗಿದೆ ಎಂದು ವಿವಾದಿತ ಹೇಳಿಕೆ ನೀಡಿದ್ದ ಈ ಗಾಯಕ ಇದೀಗ ತನ್ನ ಮಾತುಗಳನ್ನು ಬೇರೊಂದು ರೀತಿಯಲ್ಲಿ ಸಮರ್ಥಿಸಿಕೊಂಡಿದ್ದಾರೆ. ಈ ಹೇಳಿಕೆಯ ವಿರುದ್ಧ ಬೆಂಗಳೂರಿನ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗುತ್ತಿದ್ದಂತೆಯೇ ಸೋನು ನಿಗಮ್ ತನ್ನ ಹೇಳಿಕೆಯ ಟೋನ್ ಬದಲಿಸಿಕೊಂಡಿದ್ದಾರೆ. ಕನ್ನಡ ಕನ್ನಡ ಎಂದು ಪ್ರೀತಿಯಿಂದ ಕರೆಯುವುದಕ್ಕೂ, ಕನ್ನಡ ಕನ್ನಡ ಎಂದು ಧಮ್ಕಿ ಹಾಕುವುದಕ್ಕೂ ವ್ಯತ್ಯಾಸವಿದೆ ಎಂದವರು ಮರು ಹೇಳಿಕೆ ನೀಡಿದ್ದಾರೆ.
ನಾನು ಮಾತಾಡುವಾಗ ವೇದಿಕೆಯ ಬಳಿ ತುಂಬಾ ಜನ ಕಿರುಚುತ್ತಿದ್ರು. ಇದರಿಂದ ಶೋಗೆ ತೊಂದರೆಯಾಯ್ತು. ಪಹಲ್ಗಾಮ್ ನಲ್ಲಿ ಪ್ಯಾಂಟ್ ಕಳಚುವಾಗ ಯಾರೂ ಭಾಷೆ ಕೇಳಿಲ್ಲ ಎನ್ನುವುದನ್ನು ತಿಳಿಸಿದೆ
ನಾನು ಯಾವಾಗಲೂ ಕನ್ನಡ ಹಾಡನ್ನು ಇಷ್ಟಪಡುತ್ತೇನೆ. ಆದರೆ ಶೋ ಸಮಯದಲ್ಲಿ ಕೆಲವೊಬ್ಬರು ಧಮ್ಕಿ ಹಾಕುವಂತೆ ಪ್ರತಿಕ್ರಿಯಿಸಿದ್ದರು
ಎಲ್ಲ ಕನ್ನಡಿಗರು ಹೀಗೆ ಇಲ್ಲ ಕನ್ನಡಿಗರು ಒಳ್ಳೆಯವರು ಎಂದು ವಿಡಿಯೋ ಮಾಡಿ ಸ್ಪಷ್ಟನೆ ಕೊಟ್ಟಿದ್ದಾರೆ ಸೋನು ನಿಗಮ್.
ಬೆಂಗಳೂರಿನ ಕಾಲೇಜೊಂದರಲ್ಲಿ ಕಾರ್ಯಕ್ರಮ ನೀಡುತ್ತಿದ್ದಾಗ “ಕನ್ನಡ ಹಾಡು ಹಾಡಿ ಎಂದ ಅಭಿಮಾನಿ ಬೇಡಿಕೆಗೆ . ಕನ್ನಡ ಕನ್ನಡ ಎಂದಿದ್ದಕ್ಕೆ ಪಹಲ್ಗಾಮ್ ದಾಳಿಯಾಗಿದೆ ಎಂದು ಹೇಳಿಕೆ ನೀಡಿದ್ದ ಸೋನು ನಿಗಮ್ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದರು!












