ರೈತರ ಬದುಕು ಬವಣೆಯ ಅನಾವರಣೆಯ “ಶ್ರೀಮಂತ”: ಮೊದಲ ಬಾರಿಗೆ ನಾಯಕನಟನಾಗಿ ಅಭಿನಯಿಸಿದ ಸೋನು ಸೂದ್

ಹಾಸನ್ ರಮೇಶ್ ಎಂಬ ಕಾವ್ಯನಾಮದಿಂದ ಹತ್ತು ವರ್ಷಗಳಿಂದ ಕನ್ನಡ ಚಿತ್ರರಂಗದ ಹತ್ತು ಹಲವು ವಿಭಾಗಗಳಲ್ಲಿ ತೊಡಗಿಸಿಕೊಂಡಿರುವ ಟಿ.ಕೆ ರಮೇಶ್ ಇದೀಗ ತನ್ನದೇ ಆದ ಗೋಲ್ಡನ್ ರೈನ್ ಮೂವೀಸ್ ಸಂಸ್ಥೆಯಡಿಯಲ್ಲಿ ಪ್ರಥಮ ಬಾರಿಗೆ ಸ್ವತಂತ್ರವಾಗಿ “ಶ್ರೀಮಂತ” ಎಂಬ ಚಲನಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದ್ದು, ಜಿ.ನಾರಾಯಣಪ್ಪ ಮತ್ತು ವಿ.ಸಂಜಯ್ ಬಾಬು ಸಹನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ.

“ಶ್ರೀಮಂತ” ಚಲನಚಿತ್ರವು ರೈತರ ದೈನಂದಿನ ಬದುಕು ಬವಣೆಯ ಅನಾವರಣವಾಗಿದ್ದು ಆತನೇ ಜಗತ್ತಿನ ದೊಡ್ಡ ಶ್ರೀಮಂತ ಎಂದು ಸಾಕ್ಷೀಕರಿಸುವ, ಮರೆಯಾಗುತ್ತಿರುವ ಹಳ್ಳಿಯ ಸುಗ್ಗಿ, ಜಾತ್ರೆ, ಹಬ್ಬ, ಹಾಡು ಹಸೆ, ಹಳ್ಳಿ ಆಟಗಳು, ಗ್ರಾಮೀಣ ಕಲೆಗಳ ಜೊತೆ ಕರ್ನಾಟಕ ಜಾನಪದೀಯ ಸೊಗಡನ್ನು ಅನಾವರಣಗೊಳಿಸುವ ಉದ್ದೇಶ ಈ ಚಿತ್ರದ್ದಾಗಿದೆ.

ಮುಖ್ಯ ತಾರಾಗಣದಲ್ಲಿ ಸೋನು ಸೂದ್ ಪ್ರಪ್ರಥಮ ಬಾರಿಗೆ ಕನ್ನಡ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಾರೆ. ನಾಯಕಿಯಾಗಿ ವೈಷ್ಣವಿ ಪಟವರ್ಧನ್, ವೈಷ್ಣವಿ ಚಂದ್ರನ್ ಮೆನನ್ ಜೊತೆಗೆ ಕಲ್ಯಾಣ ಕರ್ನಾಟಕದ ಕ್ರಾಂತಿ ಎಂಬ ಯುವ ಪ್ರತಿಭೆಯನ್ನು ಪರಿಚಯಿಸಲಾಗಿದೆ. ಹಿರಿಯ ಕಲಾವಿದರಾದ ರಮೇಶ್ ಭಟ್, ರವಿಶಂಕರ್ ಗೌಡ, ಸಾಧು ಕೋಕಿಲ, ಚರಣ್ ರಾಜ್, ಕಲ್ಯಾಣಿ, ರಾಜು ತಾಳಿಕೋಟೆ ಮುಂತಾದವರು ಚಿತ್ರದಲ್ಲಿದ್ದಾರೆ.

 

ನಾದಬ್ರಹ್ಮ ಡಾ.ಹಂಸಲೇಖ ಸಂಗೀತ-ಸಾಹಿತ್ಯವಿದ್ದು, ರವಿಕುಮಾರ್ ಸನ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ಮಾಸ್ ಮಾದ ಸಾಹಸ, ಮದನ್ ಹರಿಣಿ ಹಾಗೂ ಮೋಹನ್ ನೃತ್ಯ ಸಂಯೋಜನೆ ಇದೆ. ಏಪ್ರಿಲ್ ತಿಂಗಳ ಎರಡನೇ ವಾರ ಚಿತ್ರವು ಬೆಳ್ಳಿ ತೆರೆಗೆ ಬರಲಿದೆ ಎಂದು ಚಿತ್ರತಂಡವು ತಿಳಿಸಿದೆ.