ವಾಟ್ಸಾಪ್ ಗ್ರೂಪ್ ಮೂಲಕ ಸಮಾಜಸೇವೆ; ‘ವಾಯ್ಸ್ ಆಫ್ ಇಂಡಿಯಾ’ ಬಳಗದಿಂದ ಮಾದರಿ ಕೆಲಸ

ಉಡುಪಿ: ಸದಾ, ಇನ್ನೊಬ್ಬರ ತೇಜೋವಧೆ, ಅಪರಾಧ ಕೃತ್ಯ, ಹರಟೆ ಹೊಡೆಯುವುದು ವಿಡಿಯೋ ಫೋಟೋ ಶೇರ್ ಮಾಡುವುದು ದೇಶದ್ರೋಹಿ ಹೇಳಿಕೆಗಳಿಗೆ ಗೋಸ್ಕರವೇ ಜಾಲತಾಣಗಳನ್ನು ಬಳಸುವ ಜನರ ಮಧ್ಯೆ ಇಲ್ಲೊಂದು ವಾಟ್ಸಪ್ ಗ್ರೂಪ್ ಸಂಘಟನೆ ಸದ್ದಿಲ್ಲದೇ ಸಮಾಜ ಸೇವೆಯಲ್ಲಿ ತೊಡಗಿದೆ. ಈವರೆಗೆ ಸುಮಾರು ₹55 ಸಾವಿರ ಹಣ ಸಂಗ್ರಹಿಸಿ ಬಡವರಿಗೆ, ಅನಾರೋಗ್ಯ ಪೀಡಿತರಿಗೆ, ಸಂಕಷ್ಟದಲ್ಲಿ ಇರುವವರಿಗೆ ಹಸ್ತಾಂತರಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದೆ.

ಸಾಮಾಜಿಕ ಜಾಲತಾಣವನ್ನು ಕೇವಲ ಮನೋರಂಜನೆಗೆ ಬಳಸುವ ಜನರ ಮಧ್ಯೆ ವಾಯ್ಸ್ ಆಫ್ ಇಂಡಿಯಾ ವಾಟ್ಸಪ್ ಗ್ರೂಪ್ ನ ಸದಸ್ಯರು ಕೇವಲ 1 ವರ್ಷದಲ್ಲೇ ₹55 ಸಾವಿರ ದೇಣಿಗೆ ಸಂಗ್ರಹಿಸಿ ಈಗಾಗಲೇ ಬಡವರಿಗೆ ನೀಡಿದ್ದಾರೆ.
ಪ್ರಥಮ ಯೋಜನೆಯಲ್ಲಿ ಸ್ವಾತಿ ಎಂಬುವವರ ಬಡ ಮಹಿಳೆಯ ಮಗಳ ಮದುವೆಗೆ ₹ 29 ಸಾವಿರ ಮೊತ್ತದ ನೆರವು ನೀಡಲಾಯಿತು.

ಎರಡನೆಯದಾಗಿ ಮೈಸೂರಿನ ಕೆಆರ್ ನಗರ ತಾಲ್ಲೂಕಿನ ಸಾಲಿಗ್ರಾಮ ಹೋಬಳಿ ದಡದಹಳ್ಳಿಯ ರಂಗಸ್ವಾಮಿ ಗ್ಯಾಸ್ ಅವಘಡದಲ್ಲಿ ದೇಹ ಮತ್ತು ಮುಖ ಸುಟ್ಟು ಪ್ರಾಣಾಪಾಯದಿಂದ ಪಾರಾಗಿದ್ದರು. ಅವರ ಮುಖದ ಪ್ಲಾಸ್ಟಿಕ್ ಸರ್ಜರಿ ಚಿಕಿತ್ಸೆಗಾಗಿ ₹26 ಸಾವಿರ ಮೊತ್ತದ ಧನಸಹಾಯ ಮಾಡಲಾಯಿತು.

ಸಹಾಯ ಮಾಡುವ ಗುಣ ಬೆಳೆಸಿಕೊಳ್ಳಿ:

ಮಾನವ ಜೀವನ ಸಾರ್ಥಕ ಆಗಬೇಕಾದರೆ ಬಡವರು, ನಿರ್ಗತಿಕರಿಗೆ ಸಹಾಯ ಮಾಡುವಂತಹ ಗುಣವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಎಂದು ಗ್ರೂಪಿನ ಅಡ್ಮಿನ್ ಕೆ.ಎ. ಅಮೀನ್ ಅಸ್ಗರ್ ಎಂದು ಕರೆ ನೀಡಿದ್ದಾರೆ.

ಮಧ್ಯಮ‌ ಕುಟುಂಬದ ಜನರೇ ಈ ವಾಟ್ಸಪ್ ಗುಂಪಿನ ಸದಸ್ಯರಾಗಿದ್ದು, ತಾವು ದುಡಿದ ಹಣದಲ್ಲಿ ಒಂದು ಭಾಗವನ್ನು ಸಮಾಜದ ಬಡಬಗ್ಗರಿಗೆ ನೆರವಾಗಿ ಮಾದರಿಯಾಗಿದ್ದಾರೆ. ಸಾಮಾಜಿಕ ಜಾಲತಾಣಗಳನ್ನು ಈ ರೀತಿಯಾಗಿ ಸಮಾಜದ ಒಳತಿಗಾಗಿ ಬಳಸಿಕೊಳ್ಳಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.