ದಿವ್ಯಾಂಗ ರಕ್ಷಣಾ ಸಮಿತಿ ಕೊಡವೂರು, ಮೋದಿ ಉತ್ಸವ ಸಮಿತಿ ಉಡುಪಿ ಜಿಲ್ಲೆ, ಬ್ರಾಹ್ಮಣ ಸಮಾಜ ಕೊಡವೂರು, ರಕ್ತನಿಧಿ ಕೇಂದ್ರ ಜಿಲ್ಲಾ ಆಸ್ಪತ್ರೆ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಮೋದಿ ಉತ್ಸವ- 2023 ಹಾಗೂ ಶಿಕ್ಷಕರ ದಿನಾಚರಣೆ ನಿಮಿತ್ತ ಶಿಕ್ಷಕರಿಗೆ ಗೌರವಾರ್ಪಣೆ ಮತ್ತು ರಕ್ತದಾನ ಶಿಬಿರ ಕಾರ್ಯಕ್ರಮವು ಕೊಡವೂರು ವಿಪ್ರಶ್ರೀ ಸಭಾ ಭವನದಲ್ಲಿ ಸೆ. 10 ರಂದು ನಡೆಯಿತು.
ಕಾರ್ಯಕ್ರಮದ ಸಂಯೋಜಕ ನಗರಸಭಾ ಸದಸ್ಯ ಕೆ ವಿಜಯ್ ಕೊಡವೂರು ಮಾತನಾಡಿ, ಸೆ.17 ರಂದು ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ನಿಮಿತ್ತ ಸತತ 1 ತಿಂಗಳು ಸೇವಾ ಕಾರ್ಯವನ್ನು ಮಾಡುವ ಮೂಲಕ ರಾಜ್ಯಕ್ಕೆ ಮಾದರಿ ಆಗಬೇಕು. ನಮ್ಮ ದೇಶ ಕಂಡ ಬಲಿಷ್ಟ ಪ್ರಧಾನ ಮಂತ್ರಿ ಬಡ ಕುಟುಂಬದಿಂದ ಬಂದರೂ ದೇಶವನ್ನು ನಿಸ್ವಾರ್ಥವಾಗಿ ಪ್ರೀತಿ ಮಾಡುವ ಮೂಲಕ ತಮ್ಮ ಜೀವನವನ್ನೇ ದೇಶಕ್ಕೆ ಸಮರ್ಪಣೆ ಮಾಡುವುದರ ಮೂಲಕ ನಮಗೆಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.
ವಿಶ್ವನಾಯಕರಾಗಿ ಬೆಳೆದಿರುವ ಮೋದಿಯವರ ಹುಟ್ಟುಹಬ್ಬದ ನಿಮಿತ್ತ ಸೇವಾ ಕಾರ್ಯ ಮಾಡುವುದರ ಮೂಲಕ ಮೋದಿಯವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಬೇಕು. ನರೇಂದ್ರ ಮೋದಿಯವರು ಮಾತ್ರ ದಿನದಲ್ಲಿ 16 ಗಂಟೆ ಕೆಲಸ ಮಾಡಿದರೆ ಭಾರತ ಪರಮ ವೈಭವ ಸ್ಥಿತಿಗೆ ಹೋಗಲು ಸಾಧ್ಯವಿಲ್ಲ, ನಾವೂ ಕೂಡ ನರೇಂದ್ರ ಮೋದಿಯವರ ರೀತಿಯಲ್ಲಿ ನಿಸ್ವಾರ್ಥವಾಗಿ ಕೆಲಸ ಮಾಡಿದರೆ ಮಾತ್ರ ಪರಮ ವೈಭವ ಸ್ಥಿತಿಗೆ ಹೋಗಲು ಸಾಧ್ಯವಿದೆ. ಜಿಲ್ಲೆಯಾದ್ಯಂತ ಅನೇಕ ಕಡೆಗಳಲ್ಲಿ ರಕ್ತದಾನ, ನೇತ್ರದಾನ ಮಾಡುವುದು, ಜಿಲ್ಲೆಯಲ್ಲಿರುವ 1000 ಕಿಂತಲೂ ಅಧಿಕ ಅಂಗನವಾಡಿ ಶಾಲೆಗೆ ಸಿಹಿ ತಿಂಡಿಗಳನ್ನು ವಿತರಣೆ ಮಾಡುವುದು, ಎಲ್ಲಾ ಗ್ರಾಮ ಪಂಚಾಯತ್ ಸ್ಥಳೀಯಾಡಳಿತದಲ್ಲಿರುವ ಪೌರಕಾರ್ಮಿಕರನ್ನು ಗೌರವಿಸುವುದು ಹೀಗೆ ಹಲವು ರೀತಿಯ ಸೇವಾ ಕಾರ್ಯವನ್ನು ಮಾಡುವ ಮೂಲಕ ಹುಟ್ಟುಹಬ್ಬದ ಆಚರಿಸಲಾಗುವುದು.
ಹುಟ್ಟುಹಬ್ಬದ ದಿನವಾದ ಸೆಪ್ಟಂಬರ್ 17 ರಂದು ಉಡುಪಿಯ 5 ತಾಲೂಕಿನಲ್ಲಿ ಸೇವಾ ಕಾರ್ಯ ಮಾಡಲಾಗುವುದು, ಕಾರ್ಕಳದ ಶಿವಪುರ, ಉಡುಪಿಯ ರಾಜಾಂಗಣದಲ್ಲಿ ಬ್ರಹತ್ ಚಿತ್ರಕಲಾ ಸ್ಪರ್ಧೆ ಹಾಗೂ ಉದ್ಯೋಗ ಮೇಳ, ಭಾಷಣ ಸ್ಪರ್ಧೆ ನಡೆಯಲಿದ್ದು, ಸ್ವಚ್ಛತಾ ಕಾರ್ಯಕ್ರಮ, ಪ್ಲಾಸ್ಟಿಕ್ ಜನಜಾಗೃತಿ, ವನಮಹೋತ್ಸವ, ಹಾಗೂ ಬಸ್ಸು ನಿಲ್ದಾಣದ ಸ್ವಚ್ಛತಾ ಕಾರ್ಯ, ದೇವಸ್ಥಾನಗಳಲ್ಲಿ ಸ್ವಚ್ಛತೆಯನ್ನು ಮಾಡುವ ಮೂಲಕ ನರೇಂದ್ರ ಮೋದಿಯವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸೋಣ ಎಂದು ಅವರು ಮನವಿ ಮಾಡಿದರು.
ಈ ಸಂಧರ್ಭದಲ್ಲಿ ಕೊಡವೂರಿನ ಹಿರಿಯರಾದ ಕಾಳು ಶೇರಿಗಾರ್, ಭೋಜಣ್ಣ ಲಕ್ಷ್ಮೀ ನಗರ, ಸಿ ಎ ಬ್ಯಾಂಕ್ ನ ಅಧ್ಯಕ್ಷ ನಾರಾಯಣ ಬಲ್ಲಾಳ್, ರಾಧಾಕೃಷ್ಣ ಮೆಂಡನ್ ,ಶಿವಕುಮಾರ್ ಕರ್ಜೆ, ಯುವಕ ಸಂಘದ ಅಧ್ಯಕ್ಷ ಪ್ರಭಾತ್ ಕೊಡವೂರು, ವಿಪ್ರ ಶ್ರೀ ಸಭಾಭವನದ ಪ್ರಮುಖ ಶ್ರೀನಿವಾಸ್ ಉಪದ್ಯಾಯ, ಜ್ಞಾನಸುಧಾ ಕಾಲೇಜಿನ ಶಿಕ್ಷಕ ದಿನೇಶ್ ಕೊಡವೂರು, ನಾರಾಯಣ ಗುರು ಶಾಲೆಯ ಪ್ರಾಧ್ಯಾಪಕ ಶಶಿಕುಮಾರ್, ಮಹಿಳಾ ಸಮಿತಿಯ ಪ್ರಮುಖರಾದ ಸುನಂದಾ ಕೊಡವೂರು ಮತ್ತು ಕೊಡವೂರಿನ ಹಿರಿಯರು ಪ್ರಮುಖರು, ಶಿಕ್ಷಕರು ಹಾಗೂ ಕಾರ್ಯಕರ್ತರು ಉಪ್ಥಿತರಿದ್ದರು.
ಎಂಜಿಎಂ ಕಾಲೇಜಿನ ಕನ್ನಡ ಉಪನ್ಯಾಸಕ ರಾಮುಜಿ ಅವರು ಸ್ವಾಗತಿಸಿ ವಂದಿಸಿದರು.